Advertisement

RCB; ಗೋ ಗ್ರೀನ್‌ ಅಭಿಯಾನ ಈ ಬಾರಿಯೂ ಮುಂದುವರಿಯಲಿದೆ

11:45 PM Mar 20, 2024 | Team Udayavani |

ಚೆನ್ನೈ: ಆರ್‌ಸಿಬಿ ತಂಡದ “ಗೋ ಗ್ರೀನ್‌’ ಅಭಿಯಾನ ಈ ಐಪಿಎಲ್‌ನಲ್ಲೂ ಮುಂದುವರಿಯಲಿದೆ. 2011ರಿಂದ ಮೊದಲ್ಗೊಂಡು ತನ್ನ ತವರು ಪಂದ್ಯವೊಂದರಲ್ಲಿ ಹಸಿರು ಉಡುಗೆ ಧರಿಸಿ ಆಡಲಿಳಿಯುವ ಆರ್‌ಸಿಬಿ, 2024ರ ತನ್ನ ಗ್ರೀನ್‌ ಜೆರ್ಸಿಯನ್ನು ಬುಧವಾರ ಬಿಡುಗಡೆ ಮಾಡಿತು.

Advertisement

“ಸ್ವಚ್ಛ ಹಾಗೂ ಹಸಿರು ಪರಿಸರ’ವೇ ಇದರ ಉದ್ದೇಶ. ಈ ಬಾರಿಯ ಗ್ರೀನ್‌ ಜೆರ್ಸಿಯ ವಿನ್ಯಾಸ ಕೂಡ ತುಸು ಬದಲಾಗಿದೆ. ಇದರಲ್ಲಿ ಹಸಿ ರಿನ ಜತೆಗೆ ಕಡು ನೀಲಿ ಬಣ್ಣವನ್ನು ಕಾಣಬಹುದಾಗಿದೆ.

ಮಂಗಳವಾರ ರಾತ್ರಿ ಎಂ. ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ಅನ್‌ ಬಾಕ್ಸ್‌ ಕಾರ್ಯಕ್ರಮ ಮುಗಿಸಿದ ಬೆನ್ನಲ್ಲೇ ಆರ್‌ಸಿಬಿ ತಂಡದ ಆಟಗಾರರು ಖಾಸಗಿ ವಿಮಾನದಲ್ಲಿ ಚೆನ್ನೈ ತಲುಪಿದರು. ಶುಕ್ರವಾರದ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ ಆತಿಥೇಯ ಚೆನ್ನೈ ತಂಡವನ್ನು ಚಿಪಾಕ್‌ನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಎದುರಿಸಲಿದೆ.

ಭವ್ಯ ಸ್ವಾಗತ
ಚೆನ್ನೈಗೆ ಬಂದಿಳಿದ ಆರ್‌ಸಿಬಿ ತಂಡಕ್ಕೆ ಭವ್ಯ ಸ್ವಾಗತ ಲಭಿಸಿತು. ಈ ಸಂದರ್ಭದಲ್ಲಿ ನೆರೆದಿದ್ದ ಅಪಾರ ಅಭಿಮಾನಿಗಳು ಜೈಕಾರ ಹಾಕಿ ದರು. ತಂಡದ ಆಟಗಾರರು ವಿಮಾನ ನಿಲ್ದಾಣದಿಂದ ಬಸ್‌ನತ್ತ ಸಾಗುತ್ತಿ ರುವ ವೀಡಿಯೋ ಒಂದನ್ನು ಅಭಿಮಾನಿಯೊಬ್ಬರು ತೆಗೆದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿರಾಟ್‌ ಕೊಹ್ಲಿ ಈ ತಂಡದ ಕೇಂದ್ರಬಿಂದು ಆಗಿದ್ದರು.

ಕಿಂಗ್‌ ಎನ್ನಬೇಡಿ: ಕೊಹ್ಲಿ ಮನವಿ
ತನ್ನನ್ನು ಕಿಂಗ್‌ ಎಂದು ಕರೆಯಬೇಡಿ, ಆ ಪದ ನನಗೆ ಮುಜುಗರವನ್ನುಂಟು ಮಾಡುತ್ತದೆ ಎಂದು ವಿರಾಟ್‌ ಕೊಹ್ಲಿ ಅಭಿಮಾನಿಗಳಲ್ಲಿ ವಿನಂತಿಸಿ ಕೊಂಡಿದ್ದಾರೆ. ಕೊಹ್ಲಿಯ ಅದ್ಭುತ ಪ್ರದರ್ಶನ, ಸಾಧನೆ ಕಂಡು ಅಭಿಮಾನಿಗಳು ಪ್ರೀತಿಯಿಂದ “ಕಿಂಗ್‌’ ಎಂದು ಕರೆಯಲಾರಂಭಿಸಿದ್ದರು. ಆದರೆ ಈ ಹೆಸರಿನಿಂದ ಕರೆಯುವುದು ಬೇಡ ಎಂದು ಸ್ವತಃ ಕೊಹ್ಲಿಯೇ ಹೇಳಿದ್ದಾರೆ.

Advertisement

ಕಾರ್ಯಕ್ರಮವೊಂದರಲ್ಲಿ ಮಾತ ನಾಡಿದ ಕೊಹ್ಲಿ, “ಮೊದಲನೆಯದಾಗಿ ನೀವು ಕಿಂಗ್‌ ಹೆಸರಿನಿಂದ ನನ್ನನ್ನು ಕರೆಯುವುದನ್ನು ನಿಲ್ಲಿಸಬೇಕು. ನನ್ನನ್ನು ವಿರಾಟ್‌ ಎಂದು ಕರೆದರೆ ಸಾಕು. ನೀವು ಕಿಂಗ್‌ ಹೆಸರಿನಿಂದ ಕರೆಯುವಾಗ ಪ್ರತೀ ವರ್ಷವೂ ನನಗೆ ಮುಜುಗರವೆನಿಸುತ್ತದೆ ಎಂದು ನಾನು ಡು ಪ್ಲೆಸಿಸ್‌ ಜತೆ ಹೇಳುತ್ತಿರುತ್ತೇನೆ. ಹಾಗಾಗಿ ದಯವಿಟ್ಟು ಈಗಿನಿಂದಲೇ ಆ ಪದ ಬಳಸುವುದನ್ನು ನಿಲ್ಲಿಸಿ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next