Advertisement

RCB: ಇನ್ನು ರಾಯಲ್‌ ಚಾಲೆಂಜರ್  “ಬೆಂಗಳೂರು’?

10:37 PM Mar 14, 2024 | Team Udayavani |

ಬೆಂಗಳೂರು: ಕನ್ನಡಿಗರ ನೆಚ್ಚಿನ ಐಪಿಎಲ್‌ ಫ್ರಾಂಚೈಸಿ ಆರ್‌ಸಿಬಿ ತನ್ನ ಹೆಸರಿನಲ್ಲಿ ತುಸು ಬದಲಾವಣೆ ಮಾಡಿಕೊಳ್ಳಲಿದೆ ಎಂಬ ಸುದ್ದಿ ಸಾಮಾ ಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆರ್‌ಸಿಬಿಯೇ ಹಂಚಿಕೊಂಡಿದ್ದ, ನಟ-ನಿರ್ದೇಶಕ ರಿಷಭ್‌ ಶೆಟ್ಟಿ ಅವರಿದ್ದ ವೀಡಿಯೋ ಇದರ ಸುಳಿವು ನೀಡಿತ್ತು. ಈಗ, ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ, ನಿರ್ಮಾಪಕಿ ಅಶ್ವಿ‌ನಿ ಕೂಡ ಆರ್‌ಸಿಬಿ ಹೆಸರು ಬದಲಾವಣೆ ಸಾಧ್ಯತೆಯ ಸುಳಿವು ನೀಡಿದ್ದಾರೆ.

Advertisement

ಈ ಮೂಲಕ ಆರ್‌ಸಿಬಿ ತನ್ನ ಹೆಸರನ್ನು “ರಾಯಲ್‌ ಚಾಲೆಂಜರ್ ಬೆಂಗಳೂರು (Bengaluru) ಎಂದು ಬದಲಾಯಿಸುವ ಸಾಧ್ಯತೆ ಯಿದೆ. ಮಾರ್ಚ್‌ 19ರಂದು ನಡೆಯುವ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದ ವೇಳೆ ಈ ಬಗ್ಗೆ ಅಧಿಕೃತ ಘೋಷಣೆಯಾಗಬಹುದು.

ಆರ್‌ಸಿಬಿ ಎಕ್ಸ್‌ ನಲ್ಲಿ ಹಂಚಿಕೊಂಡಿರುವ ಇತ್ತೀ ಚಿನ ವೀಡಿಯೋವೊಂದರಲ್ಲಿ ಅಶ್ವಿ‌ನಿ, ಅಂತರ್ಜಾಲದಲ್ಲಿ ರಾಯಲ್‌ ಚಾಲೆಂಜರ್ ಬ್ಯಾಂಗಳೂರ್‌(Bangalore) ಎಂದು ಟೈಪ್‌ ಮಾಡುತ್ತಾರೆ.

ಬಳಿಕ ಪವರ್‌ ಸ್ಟಾರ್‌ ಪುನೀತ್‌, ಆರ್‌ಸಿಬಿ ಧ್ವಜ ಹಿಡಿದು ಅಭಿಮಾನ ಮೆರೆದ ಹಳೆಯ ಚಿತ್ರವೊಂದನ್ನು ದಿಟ್ಟಿಸುತ್ತಾರೆ. ಆಗ ಬ್ಯಾಂಗಳೂರ್‌ (Bangalore) ಎಂದು ಟೈಪ್‌ ಮಾಡಿದ್ದನ್ನು ಅಳಿಸುತ್ತಾರೆ. ಇದಕ್ಕೂ ಮುನ್ನ ಆರ್‌ಸಿಬಿ ಬಿಡುಗಡೆ ಮಾಡಿದ್ದ, ರಿಷಭ್‌ ಶೆಟ್ಟಿ ವೀಡಿಯೋದಲ್ಲೂ ಇಂಥದ್ದೇ ಸುಳಿವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next