Advertisement

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

12:09 PM Apr 22, 2024 | Team Udayavani |

ಮುಂಬೈ: 17ನೇ ಸೀಸನ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ಸರಣಿ ಮುಂದುವರಿದಿದೆ. ರವಿವಾರ ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧದ ನಡೆದ ಪಂದ್ಯದಲ್ಲಿ ಒಂದು ರನ್ ಅಂತರದಿಂದ ಸೋಲು ಕಂಡ ಆರ್ ಸಿಬಿ ಆಡಿದ ಎಂಟು ಪಂದ್ಯಗಳಲ್ಲಿ ಏಳನ್ನು ಸೋಲು ಕಂಡಿದೆ.

Advertisement

ಆರ್ ಸಿಬಿ ಪ್ರಸ್ತುತ 8 ಪಂದ್ಯಗಳಿಂದ ಕೇವಲ 2 ಅಂಕಗಳನ್ನು ಹೊಂದಿದೆ. ತಂಡದ ನೆಟ್ ರನ್ ರೇಟ್ ಕೇವಲ -1.046 ಇದೆ. ಕೆಕೆಆರ್ ವಿರುದ್ಧದ ಆರ್‌ ಸಿಬಿಯ ಸೋಲು ಪ್ಲೇಆಫ್‌ ಗೆ ತಲುಪುವ ಕೊನೆಯ ಭರವಸೆಗೆ ದೊಡ್ಡ ಹೊಡೆತ ಕೊಟ್ಟಿದೆ. ಆದರೆ ಫಾಫ್ ಪಡೆಯ ಕನಸು ಸಂಪೂರ್ಣವಾಗಿ ಮುಗಿದಿಲ್ಲ. ಇದುವರೆಗೆ ಕೈಕೊಟ್ಟಿರುವ ಅದೃಷ್ಟ ಇನ್ನು ಕೈಹಿಡಿದರೆ ಪ್ಲೇ ಆಫ್ ಗೆ ತಲುಪುವುದು ಅಸಾಧ್ಯವೇನಲ್ಲ.

2024 ರ ಐಪಿಎಲ್ ನಲ್ಲಿ ಆರ್ ಸಿಬಿ ಇನ್ನು ಆರು ಪಂದ್ಯಗಳನ್ನು ಆಡಲಿದೆ. ಆರು ಪಂದ್ಯಗಳನ್ನು ಗೆದ್ದರೆ ಆರ್ ಸಿಬಿ 14 ಅಂಕಗಳಿಗೆ ತಲುಪಲಿದೆ. ಸಾಮಾನ್ಯವಾಗಿ, ಐಪಿಎಲ್ ಪ್ಲೇಆಫ್ ಹಂತವನ್ನು ತಲುಪಲು ತಂಡಗಳಿಗೆ 16 ಅಂಕಗಳ ಅಗತ್ಯವಿದೆ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ತಂಡಗಳು 14 ಅಂಕಗಳೊಂದಿಗೆ ಅರ್ಹತೆ ಪಡೆಯಲು ಸಾಧ್ಯವಿದೆ. ಆದರೆ 14 ಅಂಕಗಳನ್ನು ಪಡೆದರೂ ಆರ್ ಸಿಬಿ ಪ್ಲೇ ಆಫ್ ತಲುಪಲು ಇತರ ತಂಡಗಳು ಫಲಿತಾಂಶಗಳು ಕೂಡಾ ನಿರ್ಣಾಯಕ.

ಆದ್ದರಿಂದ, ಆರ್ ಸಿಬಿಯ ಮುಂದಿನ ಹಾದಿಯು ಸಾಕಷ್ಟು ಸ್ಪಷ್ಟವಿದೆ. ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ, ಇತರ ತಂಡಗಳ ಫಲಿತಾಂಶಗಳು ಆರ್ ಸಿಬಿಗೆ ಅನುಕೂಲವಾಗುವಂತೆ ಬರಬೇಕಿದೆ. 14 ಅಂಕಗಳೊಂದಿಗೆ ಅದೃಷ್ಟದ ಬಲದಿಂದ ಆರ್ ಸಿಬಿ ಮತ್ತೆ ಪ್ಲೇ ಆಫ್ ತಲುಪಬಹುದು.

Advertisement

Udayavani is now on Telegram. Click here to join our channel and stay updated with the latest news.

Next