Advertisement

ಆರ್ ಸಿಬಿಗೆ ಹೊಸ ಸಮಸ್ಯೆ: ದೇವದತ್ತ ಪಡಿಕ್ಕಲ್ ಗೆ ಕೋವಿಡ್ ಪಾಸಿಟಿವ್

03:29 PM Apr 04, 2021 | Team Udayavani |

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಪಡಿಕ್ಕಲ್ ಈ ಬಾರಿ ಕೋವಿಡ್ ಸೋಂಕಿಗೆ ಒಳಗಾದ ಮೂರನೇ ಆಟಗಾರನಾಗಿದ್ದಾರೆ.

Advertisement

ದೇವದತ್ತ ಪಡಿಕ್ಕಲ್ ಸದ್ಯ ತಂಡದಿಂದ ಬೇರ್ಪಟ್ಟಿದ್ದು, ಕ್ವಾರಂಟೈನ್ ನಲ್ಲಿದ್ದಾರೆ. ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ ಗೂ ಕೋವಿಡ್ ಸೋಂಕು ತಾಗಿರುವುದು ದೃಢವಾಗಿತ್ತು.

ದೇವದತ್ತ ಪಡಿಕ್ಕಲ್ ಮೊದಲ ಎರಡು ಪಂದ್ಯಗಳನ್ನು ತಪ್ಪಿಕೊಳ್ಳುವ ಸಾಧ್ಯತೆಯಿದೆ. ಈ ಬಾರಿಯ ಐಪಿಎಲ್ ಕೂಟ ಎಪ್ರಿಲ್ 9ರಂದು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಬೆಂಗಳೂರು ತಂಡಗಳು ಸೆಣಸಾಡಲಿದೆ.

ಕಳೆದ ವರ್ಷ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದ ಪಡಿಕ್ಕಲ್ 15 ಇನ್ನಿಂಗ್ಸ್ ನಲ್ಲಿ 473 ರನ್ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next