Advertisement
ಪುಟ್ಟ ಕ್ರೀಸು, ಸ್ಕೋರ್‌ಬೋರ್ಡು…ಎಲ್ಲೋ ಕ್ರಿಕೆಟ್ ಸ್ಟೇಡಿಯಮ್ಮೊಳಗೋ, ಕ್ರಿಕೆಟ್‌ನ ಮ್ಯೂಸಿಯಂ ಒಳಗೋ ಇದ್ದೇವೇನೋ ಎಂಬ ಭಾವ ಹುಟ್ಟಿಸುವ ಈ ಹೋಟೆಲ್ ಒಳಗೆ, ಆರ್‌ಸಿಬಿ ಹುಡುಗರ ದೊಡ್ಡ ದೊಡ್ಡ ಭಾವಚಿತ್ರಗಳಿವೆ. ಆರ್‌ಸಿಬಿ ಆಟಗಾರರ ವೀರೋಚಿತ ಆಟದ ದೃಶ್ಯಗಳನ್ನು ಫ್ರೆàಮ್ ಹಾಕಿಸಿ, ಗೋಡೆ ಮೇಲೆ ತೂಗಿಡಲಾಗಿದೆ. ಗೋಡೆ ಮೇಲೆ ಕ್ರಿಕೆಟ್ ಚೆಂಡುಗಳನ್ನೇ ಹೋಲುವ ವಿನ್ಯಾಸವಿದೆ. ಊಟದ ಟೇಬಲ್ಲುಗಳ ನಡುವೆ ಒಂದು ಪುಟ್ಟ ಕ್ರೀಸ್ ಅನ್ನೂ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲೇ ಇರುವ ಗೋಡೆಯ ಮೇಲೆ ಸ್ಕೋರ್ ಬೋರ್ಡ್ ಕಾಣಿಸುತ್ತದೆ. ಫ್ರಿ ರನ್, ವಿಕೆಟ್, ಎಲ್‌ಬಿಡಬ್ಲ್ಯು, ಫೋರ್, ಸಿಕ್ಸ್, ಔಟ್… ಕ್ರಿಕೆಟ್‌ನಲ್ಲಿ ಬಳಕೆ ಆಗುವಂಥ ಶಬ್ದಗಳನ್ನು ಇಲ್ಲಿ ದೊಡ್ಡದಾಗಿ ನಮೂದಿಸಲಾಗಿದೆ. ಕ್ರೀಸ್‌ನ ಮೇಲ್ಭಾಗದಲ್ಲೇ ದೊಡ್ಡ ಎಲ್‌ಇಡಿ ಸ್ಕ್ರೀನ್ ಇದೆ. ಆರ್‌ಸಿಬಿ ಅಲ್ಲದೇ, ಐಪಿಎಲ್‌ನ ಯಾವುದೇ ತಂಡ ಆಡುವ ಪಂದ್ಯಗಳನ್ನು ಇಲ್ಲಿ ಲೈವ್ ಆಗಿ ಕಣ್ತುಂಬಿಕೊಳ್ಳಬಹುದು.
ಸ್ಟೇಡಿಯಮ್ಮಿನಲ್ಲಿ ಕ್ರಿಕೆಟ್ ನೋಡುತ್ತಾ ಕುಳಿತಾಗ, ಸ್ಪೈಡರ್ ಕ್ಯಾಮೆರಾ ಅತ್ತಿಂದಿತ್ತ ಹಾರಾಡುತ್ತಾ, ದೃಶ್ಯಗಳನ್ನು ಸೆರೆಹಿಡಿಯುವುದನ್ನು ನೋಡಿರುತ್ತೀರಿ. ಇಲ್ಲೂ ಸ್ಪೈಡರ್ ಕ್ಯಾಮೆರಾದ ಮಾದರಿ ಇದೆ. ಫ್ಲಡ್ ಲೈಟ್, ಡ್ರೋಣ್ ಕ್ಯಾಮೆರಾಗಳ ದರ್ಶನ ಭಾಗ್ಯವೂ ಸಿಗಲಿದೆ. ಆರ್‌ಸಿಬಿಯ ಎಲ್ಲ ಆಟಗಾರರ ಜೆರ್ಸಿಗಳನ್ನೂ ಇಲ್ಲಿ ನೇತುಹಾಕಲಾಗದ್ದು, ಒಂದು ರೀತಿಯಲ್ಲಿ ಇದು ಆರ್‌ಸಿಬಿ ಮ್ಯೂಸಿಯಂನಂತೆಯೇ ತೋರುತ್ತದೆ. ಈ ಹೋಟೆಲ್‌ನ ಮೆನುಗಳಲ್ಲೂ ಕ್ರಿಕೆಟ್‌ತನವೇ ತುಂಬಿಕೊಂಡಿದೆ.ಆ್ಯಪಲ್ ಜ್ಯೂಸ್‌ಗೆ “ಹೌಝlಟ್’ ನಂತೆ, ಇತರೆ ಆಹಾರಗಳಿಗೂ ಅಂಥದ್ದೇ ಹೆಸರು ಇಡಲಾಗಿದೆ. ಒಟ್ಟಿನಲ್ಲಿ, ಫೆವಿಲಿಯನ್‌ನಲ್ಲಿ ಕುಳಿತಾಗ ಮ್ಯಾಚ್ ನೋಡಿದಾಗ ಹೇಗೆ ಅನುಭವ ಆಗುತ್ತೋ, ಅಂಥದ್ದೇ ಅನುಭವ ಇಲ್ಲಾಗುತ್ತೆ.
Related Articles
ಗ್ರಾಹಕರು ಆಸೀನರಾಗುವ ಕುರ್ಚಿಗಳಿಗೆ ಇರುವ ಕಾಲುಗಳೂ ವಿಕೆಟ್‌ನ ಮಾದರಿಯಲ್ಲೇ ಇವೆ. ಗ್ಲಾಸ್‌ನ ಟೇಬಲ್‌ಗಳ ಒಳಗೆ, ಬ್ಯಾಟು, ಲೆಗ್ ಪ್ಯಾಡ್, ಗ್ಲೌಸ್, ಬೆಲ್ಸ್‌ಗಳನ್ನು ಕಾಣುವಂತೆ ಇಡಲಾಗಿದೆ. ಹಾಗೇ ಮೇಲಕ್ಕೆ ನೋಡಿದರೆ, ತೂಗುತ್ತಿರುವ ಹೆಲ್ಮೆಟ್‌ನ ದರ್ಶನವಾಗುತ್ತದೆ.
Advertisement
ಎಲ್ಲಿದೆ? : ನಂ. 922, 28ನೇ ಮುಖ್ಯರಸ್ತೆ,ಜಯನಗರ 9ನೇ ಬ್ಲಾಕ್
ಸಂಪರ್ಕ: 080 41400545