Advertisement
ಸ್ವತ್ಛ ಮತ್ತು ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲು ವಾಗಿ ಆರ್‌ಸಿಬಿ 2011ರಿಂದ ಈ ಅಭಿಯಾನವನ್ನು ನಡೆಸಿಕೊಂಡು ಬಂದಿದೆ. ಸಾಮಾನ್ಯವಾಗಿ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಹಗಲು ವೇಳೆ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಕ್ರಿಕೆಟಿಗರು ಹಸಿರು ಜೆರ್ಸಿ ಧರಿಸುವುದು ವಾಡಿಕೆ. ಆದರೆ ಕೋವಿಡ್ ಕಾರಣದಿಂದ 2021ರಿಂದ ಮೊದಲ್ಗೊಂಡು 2023ರ ತನಕ ಸೀಮಿತ ತಾಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆದುದರಿಂದ ಈ ಸಂಪ್ರದಾಯವನ್ನು ಪಾಲಿಸ ಲಾಗಲಿಲ್ಲ. 2023ರಲ್ಲಿ ಮತ್ತೆ ಬೆಂಗಳೂರು ಪಂದ್ಯದಲ್ಲೇ ಹಸಿರು ಉಡುಗೆ ಧರಿಸಿ ಆಡಿತು. ಈ ಬಾರಿ ತವರಿ ನಾಚೆಯ ಪಂದ್ಯದಲ್ಲಿ ಗೋ ಗ್ರೀನ್ ಅಭಿಯಾನ ಅನಿವಾರ್ಯ ವಾಗಿದೆ.
ಆರ್‌ಸಿಬಿಗೆ ಇನ್ನು ತವರಲ್ಲಿ 3 ಪಂದ್ಯಗಳಿವೆ. ಗುಜರಾತ್, ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ. ಆದರೆ ಇವೆಲ್ಲವೂ ರಾತ್ರಿ ಪಂದ್ಯಗಳು. ಆರ್‌ಸಿಬಿ ಪ್ರಸಕ್ತ ಸೀಸನ್‌ನಲ್ಲಿ ಆಡಲಿರುವ ಡೇ ಮ್ಯಾಚ್ ಒಂದು ಮಾತ್ರ. ಇದು ರವಿವಾರ ಕೆಕೆಆರ್ ವಿರುದ್ಧ ಕೋಲ್ಕತಾದಲ್ಲಿ ನಡೆಯುವ ಕಾರಣ ಈ ಪಂದ್ಯವನ್ನೇ ಗೋ ಗ್ರೀನ್ ಅಭಿಯಾನಕ್ಕೆ ಆಯ್ದುಕೊಂಡಿದೆ. ಈ ಜೆರ್ಸಿಯ ಬಹು ಭಾಗ ಹಸಿರಿನಿಂದ ಕೂಡಿದ್ದು, ಶರ್ಟ್‌ನ ಮೇಲ್ಭಾಗ ನೀಲಿ ಬಣ್ಣವನ್ನು ಹೊಂದಿದೆ. ಬೆಂಗಳೂರಿನ ಮೂರು ಕೆರೆಗಳಿಗೆ ಪುನರುಜ್ಜೀವ
Related Articles
Advertisement
ಇಂಡಿಯಾ ಕೇರ್ಸ್ ಫೌಂಡೇಶನ್ ವರದಿಯ ಪ್ರಕಾರ ಆರ್ ಸಿಬಿ , ಕಣ್ಣೂರು ಕೆರೆ, ಇಟ್ಟಗಲ್‌ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಗಳ ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಲಿದೆ.
ಆರ್‌ಸಿಬಿಯು ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಇಎಸ್‌ಜಿ ಬದ್ಧತೆಯ ಭಾಗವಾಗಿ ಕೆರೆಗಳ ಸುಧಾರಣಾ ಕಾರ್ಯಗಳ ಯೋಜನೆಯನ್ನು ಪ್ರಾರಂಭಿಸಿದ್ದು, ಕಾವೇರಿ ನೀರು ತಲುಪದ, ಅಂತರ್ಜಲ ಮತ್ತು ಮೇಲ್ಮೈ ನೀರಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಪ್ರದೇಶಗಳಲ್ಲಿ ಜಲಮೂಲಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ.