Advertisement

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

10:27 PM May 23, 2024 | Team Udayavani |

ಬೆಂಗಳೂರು: ಈ ಐಪಿಎಲ್‌ನ ದ್ವಿತೀಯಾರ್ಧದಲ್ಲಿ ಅಸಾಮಾನ್ಯ ಕಮ್‌ಬ್ಯಾಕ್‌ ಮಾಡಿದ್ದ ಆರ್‌ಸಿಬಿ, ಪ್ಲೇಆಫ್ಗೇರಿ ಹುರುಪು ಹೆಚ್ಚಿಸಿತ್ತು. ಆದರೆ ಬುಧವಾರ, ರಾಜಸ್ಥಾನ್‌ ವಿರುದ್ಧ ಎಲಿಮಿನೇಟರ್‌ನಲ್ಲಿ ಸೋತ ಬಳಿಕ ತಂಡ, ಅಭಿಮಾನಿಗಳನ್ನಾವರಿಸಿದ್ದ ಸಂಭ್ರಮ ಒಮ್ಮೆಗೆ ಕರಗಿದೆ. 16 ವರ್ಷಗಳಿಂದ ಕಾಣುತ್ತಿರುವ “ಕಪ್‌’ ಕನಸು ಈ ಬಾರಿಯೂ ಕೈಜಾರಿದೆ. ಇದು ಇಡೀ ಆರ್‌ಸಿಬಿ ಬಳಗವನ್ನು ಬೇಸರಗೊಳಿಸಿದೆ.

Advertisement

ಅಸಲಿಗೆ ಪ್ಲೇಆಫ್ ಅರ್ಹತೆಯೇ ದೂರದ ಮಾತಾಗಿದ್ದ ಆರ್‌ಸಿಬಿ ಪವಾಡ ರೀತಿಯಲ್ಲಿ ನಾಕೌಟ್‌ ಹಂತಕ್ಕೇರಿತ್ತು. ಎ.25ರಿಂದ ಹೈದರಾಬಾದ್‌, ಗುಜರಾತ್‌ (2 ಬಾರಿ), ಪಂಜಾಬ್‌, ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಗೆದ್ದು ಸತತ 6 ಗೆಲುವಿನೊಂದಿಗೆ ಪ್ಲೇಆಪ್‌ಗೆ ಪ್ರವೇಶಿಸಿತ್ತು. ಅದರಲ್ಲೂ ಚೆನ್ನೈ ವಿರುದ್ಧ ಎಲ್ಲ ಲೆಕ್ಕಾಚಾರಗಳನ್ನು ದಾಟಿ ಗೆದ್ದಿದ್ದು ಪವಾಡವೇ ಸರಿ. ಋತುವಿನ ಆರಂಭದಲ್ಲಿ ಶುರುವಾಗಿದ್ದ “ಆರ್‌ಸಿಬಿಯ ಹೊಸ ಅಧ್ಯಾಯ’ ಎಲಿಮಿನೇಟರ್‌ನಲ್ಲೇ ಅಂತ್ಯವಾಗಿದೆ.

ಎಲ್ಲಿದೆ ವೈಫ‌ಲ್ಯ?:

  1. ಆರಂಭದಿಂದಲೂ ಆರ್‌ಸಿಬಿಗೆ ಬೌಲರ್‌ಗಳ ವೈಫ‌ಲ್ಯ ಪ್ರಬಲವಾಗಿ ಕಾಡಿತ್ತು. ರಾಜಸ್ಥಾನ್‌ ವಿರುದ್ಧದ ಎಲಿಮಿನೇಟರ್‌ನಲ್ಲೂ ಇದು ಪ್ರತಿಬಿಂಬಿತವಾಯಿತು.
  2. ಕೂಟದಲ್ಲಿ ತಂಡದ ಬ್ಯಾಟಿಂಗ್‌ ಬಹುತೇಕ ವಿರಾಟ್‌ ಕೊಹ್ಲಿ ಮೇಲೆ ಅವಲಂಬಿತವಾಗಿತ್ತು. ಕಡೆಕಡೆಗೆ ರಜತ್‌ ಪಾಟೀದಾರ್‌, ದಿನೇಶ್‌ ಕಾರ್ತಿಕ್‌, ವಿಲ್‌ ಜ್ಯಾಕ್ಸ್‌ ನೆರವಿಗೆ ನಿಂತರು.
  3. ತಂಡದಲ್ಲಿ ಧೋನಿ ರೀತಿಯ ಫಿನಿಶರ್‌ಗಳ, 4,5,6ನೇ ಕ್ರಮಾಂಕದಲ್ಲಿ ಸ್ಫೋಟಕವಾಗಿ ಆಟವಾಡಬಲ್ಲ ಬ್ಯಾಟರ್‌ಗಳ ಕೊರತೆಯಿದೆ.
  4. ತಂಡದ ಕ್ಷೇತ್ರರಕ್ಷಣೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರಿಂದ ರನ್‌ ಸೋರಿಹೋಗಿದೆ.
  5. ತಂಡದ ಪ್ರಮುಖರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌, ನಾಯಕ ಫಾ ಡು ಪ್ಲೆಸಿಸ್‌, ವೇಗಿಗಳಾದ ಮೊಹಮ್ಮದ್‌ ಸಿರಾಜ್‌, ಅಲ್ಜಾರಿ ಜೋಸೆಫ್, ಸ್ಪಿನ್ನರ್‌ ಮಾಯಾಂಕ್‌ ದಾಗರ್‌ ವೈಫ‌ಲ್ಯ ಕಂಡಿದ್ದಾರೆ.

ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮಡುಗಟ್ಟಿದ ನೋವು:

ರಾಜಸ್ಥಾನ್‌ ವಿರುದ್ಧದ ಪಂದ್ಯದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್‌ ರೂಮ್‌ ಮಂಕಾಗಿತ್ತು. ಆರ್‌ಸಿಬಿ ಬಳಗದಲ್ಲಿ ನೋವೇ ಮಡುಗಟ್ಟಿತ್ತು. ಸೋಲಿನ ಬಳಿಕ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಆರ್‌ಸಿಬಿ ಆಟಗಾರರು ಬೇಸರದಲ್ಲಿರುವ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next