ಅಹಮದಾಬಾದ್: ಸತತ ಸೋಲಿನ ಬಳಿಕ ಗೆಲುವಿನ ರುಚಿ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಎರಡೂ ತಂಡಗಳು ಗೆಲುವಿಗಾಗಿ ಎದುರು ನೋಡುತ್ತಿದ್ದು, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದೆ.
ಟಾಸ್ ಗೆದ್ದ ಫಾಫ್ ಡುಪ್ಲೆಸಿಸ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಆರ್ ಸಿಬಿ ತಂಡದಲ್ಲಿ ಗ್ಲೆನ್ ಮ್ಯಾಕ್ಸವೆಲ್ ಮರಳಿದ್ದಾರೆ. ಗುಜರಾತ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಎರಡೂ ತಂಡಗಳು ತಲಾ 9 ಪಂದ್ಯಗಳನ್ನಾಡಿವೆ. ಶುಭಮನ್ ಗಿಲ್ ಪಡೆ ನಾಲ್ಕನ್ನು ಗೆದ್ದು 7ನೇ ಸ್ಥಾನದಲ್ಲಿದೆ. ಆರ್‌ಸಿಬಿ ಗೆದ್ದದ್ದು ಎರಡನ್ನು ಮಾತ್ರ. ಅದಿನ್ನೂ ಕೊನೆಯ ಸ್ಥಾನವನ್ನು ಬಿಟ್ಟು ಮೇಲೆದ್ದಿಲ್ಲ. ರನ್‌ರೇಟ್ ಕೂಡ ಮೈನಸ್‌ನಲ್ಲಿದೆ. ಉಳಿದೆಲ್ಲ ಪಂದ್ಯ ಗೆದ್ದರೂ ಒಟ್ಟುಗೂಡುವುದು 14 ಅಂಕ ಮಾತ್ರ. ಆದ್ದರಿಂದ ಪ್ಲೇ ಆಫ್ ಪ್ರವೇಶ ಅಸಾಧ್ಯ. ಹೀಗಾಗಿ ಹೈದರಾಬಾದ್‌ಗೆ ಸೋಲುಣಿಸಿದಂತೆ ಒಂದೊಂದೇ ತಂಡಕ್ಕೆ ಆಘಾತ ನೀಡಿ, ಆ ತಂಡಗಳ ಹಾದಿಗೆ ಮುಳ್ಳಾ ಗುವು ದೊಂದೇ ಆರ್‌ಸಿಬಿ ಮುಂದಿರುವ ಯೋಜನೆ. ಹೀಗಾಗಿ ಗುಜರಾತನ್ನು ಅವರದೇ ನೆಲದಲ್ಲಿ ಮಣಿ ಸುವ ಮೂಲಕ ಆರ್‌ಸಿಬಿ ತನ್ನ ಅಭಿಮಾನಿಗಳನ್ನು ಒಂದಿಷ್ಟು ಸಮಾಧಾನ ಪಡಿಸಬಹುದು. ಹಾಗೆಯೇ ಇನ್ನೊಂದು ಪಂದ್ಯ ಸೋತರೂ ನಿರ್ಗಮನ ಖಾತ್ರಿಗೊಳ್ಳಲಿದೆ.
ತಂಡಗಳು:
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿ.ಕೀ), ಶುಬ್ಮನ್ ಗಿಲ್ (ನಾ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಮೋಹಿತ್ ಶರ್ಮಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿ.ಕೀ), ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್