Advertisement

RCB; ನಮ್ಮ ಬೌಲಿಂಗ್ ನಲ್ಲಿ ಅಂತಹ….: ಸತತ ಸೋಲಿಗೆ ಕಾರಣ ತಿಳಿಸಿದ ನಾಯಕ ಪ್ಲೆಸಿಸ್

09:55 AM Apr 12, 2024 | Team Udayavani |

ಮುಂಬೈ: 2024ರ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ತನ್ನ ಐದನೇ ಪಂದ್ಯ ಸೋತಿದೆ. ಆರು ಪಂದ್ಯಗಳಲ್ಲಿ ಐದನ್ನು ಸೋತಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಇದು ಹೊಸ ಅಧ್ಯಾಯ ಎಂದು ಸೀಸನ್ ಆರಂಭಿಸಿದ್ದ ಆರ್ ಸಿಬಿ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದೆ.

Advertisement

ಗುರುವಾರ ರಾತ್ರಿ ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸುಲಭದ ತುತ್ತಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 196 ರನ್ ಗಳ ಉತ್ತಮ ಮೊತ್ತವನ್ನೇ ಕಲೆ ಹಾಕಿತು. ಆದರೆ ಇದು ಲೆಕ್ಕವೇ ಇಲ್ಲದಂತೆ ಬ್ಯಾಟ್ ಬೀಸಿದ ಮುಂಬೈ ಬ್ಯಾಟರ್ ಗಳು ಕೇವಲ 15.3 ಓವರ್ ಗಳಲ್ಲಿ ಗುರಿ ಬೆನ್ನತ್ತಿದರು.

ಪಂದ್ಯದ ಬಳಿಕ ಮಾತನಾಡಿದ ಬೆಂಗಳೂರು ನಾಯಕ ಫಾಫ್ ಡುಪ್ಲೆಸಿಸ್ ಸೋಲಿಗೆ ಕಾರಣ ಹುಡುಕುತ್ತಾ ಬೌಲರ್ ಗಳನ್ನು ದೂರಿದರು.” ಬ್ಯಾಟಿಂಗ್ ದೃಷ್ಟಿಕೋನದಿಂದ ನನಗೆ ಅನಿಸುತ್ತದೆ, ನಾವು 200 ರನ್ ಹೆಚ್ಚು ಗಳಿಸಬೇಕು. ನಮ್ಮ ಬೌಲಿಂಗ್‌ ನಲ್ಲಿ ನಮ್ಮ ಬಳಿ ಅಷ್ಟು ಅಸ್ತ್ರಗಳಿಲ್ಲ” ಎಂದರು.

“ಬೌಲಿಂಗ್ ನಲ್ಲಿ ನಾವು ನುಗ್ಗಿ ಆಡಲು ಸಾಧ್ಯವಾಗದ ವೈಫಲ್ಯ ಹೊಂದಿದ್ದೇವೆ. ನಾವು ಪವರ್‌ಪ್ಲೇನಲ್ಲಿ ಎದುರಾಳಿಯ ಇಬ್ಬರು ಅಥವಾ ಮೂವರನ್ನು ಔಟ್ ಮಾಡಬೇಕಿದೆ. ಮೊದಲ ನಾಲ್ಕು ಓವರ್‌ಗಳ ನಂತರ ನಾವು ಹಿನ್ನಡೆಯಲ್ಲಿದ್ದೇವೆ ಎಂದು ಪ್ರತಿ ಸಲ ಅನಿಸುತ್ತಿದೆ” ಎಂದು ಪ್ಲೆಸಿಸ್ ಹೇಳಿದರು. ಎರಡನೇ ಇನ್ನಿಂಗ್ಸ್‌ ನಲ್ಲಿ ಇಬ್ಬನಿ ದೊಡ್ಡ ಪಾತ್ರವನ್ನು ವಹಿಸಿದ್ದರಿಂದ ಆರ್ ಸಿಬಿ ಗಳಿಸಿದ ಸ್ಕೋರ್‌  ಕಡಿಮೆಯಾಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next