ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಮವಾರದ ಸೋಲಿನ ಬಳಿಕ ಸತತ ಐದನೇ ಸೋಲನ್ನು ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್ 2023 ರಲ್ಲಿ ಮೊದಲ ಗೆಲುವಿಗೆ ಹೋರಾಡುತ್ತಿದೆ. ಇನ್ನು ಮೂರು ಪಂದ್ಯಗಳು ಉಳಿದಿದ್ದು, ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯುವ ಸಾಧ್ಯತೆಗಳು ಕ್ಷೀಣವೆಂದು ತೋರುತ್ತದೆ. ಆದರೆ ಒಂದು ಲೆಕ್ಕಾಚಾರದ ಪ್ರಕಾರ, ಅವರು ಆರ್ ಸಿಬಿ ತಂಡವು ಇನ್ನೂ ರೇಸ್ ನಿಂದ ಹೊರಬಂದಿಲ್ಲ.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡ ಅಶೋಕ ಬಳೂಟಗಿ ಮನೆಗೆ ಬಿ.ವೈ.ವಿಜಯೇಂದ್ರ ಭೇಟಿ
ಅಗ್ರ ಮೂರು ತಂಡಗಳು ಪ್ಲೇಆಫ್‌ಗೆ ಪ್ರವೇಶಿಸುತ್ತವೆ. ಟೇಬಲ್-ಟಾಪ್ಪರ್ ತಂಡವು ಫೈನಲ್ ಗೆ ನೇರ ಪ್ರವೇಶವನ್ನು ಪಡೆಯುತ್ತಾರೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದ್ದು, ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ಮೂರನೇ ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ. ಆರ್‌ಸಿಬಿ ಇದುವರೆಗೆ ಆಡಿದ ಐದೂ ಪಂದ್ಯಗಳಲ್ಲಿ ಸೋತು ಪಾಯಿಂಟ್‌ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಆರ್ ಸಿಬಿ ಪ್ಲೇಆಫ್ ಗೆ ಅರ್ಹತೆ ಪಡೆಯಲು, ಅವರು ತಮ್ಮ ಉಳಿದಿರುವ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲಬೇಕು. ಅಲ್ಲದೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಪಂದ್ಯಗಳಲ್ಲಿ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಅನ್ನು ಸೋಲಿಸಬೇಕು. ಒಂದು ವೇಳೆ ಗುಜರಾತ್ ಜೈಂಟ್ಸ್ ತಂಡವು ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿದರೆ, ಆರ್ ಸಿಬಿಯು ಪ್ಲೇ ಆಫ್ ಗೆ ಪ್ರವೇಶಿಸುವ ಅವಕಾಶವಿದೆ.
ಆರ್ ಸಿಬಿ ತಂಡವು ಸ್ಮೃತಿ ಮಂಧನಾ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ ಇತರರನ್ನು ಒಳಗೊಂಡಂತೆ ಪ್ರತಿಭಾವಂತ ತಂಡವನ್ನು ಹೊಂದಿದೆ, ಆದರೆ ಅವರು ಕೂಟದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.