ಲೂಸಿಯಾನ: ಈ ವರ್ಷದ ಮಿಸ್ ಯೂನಿವರ್ಸ್ ಸ್ಪರ್ಧೆಯು ಅಮೆರಿಕದ ಲೂಸಿಯಾನದಲ್ಲಿ ನಡೆಯಿತು. ಅಮೆರಿಕದ ಮಿಸ್ ಯುಎಸ್ಎ ಆರ್’ಬೊನಿ ಗೇಬ್ರಿಯಲ್ ಅವರು 2022ರ ವಿಶ್ವ ಸುಂದರಿ ಕಿರೀಟವನ್ನು ಅಲಂಕರಿಸಿದ್ದಾರೆ.
28 ವರ್ಷದ ರೂಪದರ್ಶಿ ಗೇಬ್ರಿಯಲ್ ಅವರು ಫ್ಯಾಷನ್ ಡಿಸೈನರ್ ಬೋಧಕರಾಗಿದ್ದಾರೆ. ಅವರು ಮಿಸ್ ಯುಎಸ್ ಎ ಕಿರೀಟ ಗೆದ್ದ ಮೊದಲ ಫಿಲಿಪಿನೋ ಅಮೆರಿಕನ್ ಕೂಡ ಆಗಿದ್ದಾರೆ.
ವೆನೆಜುವೆಲಾದ ಅಮಂಡಾ ಡುಡಾಮೆಲ್ ಮೊದಲ ರನ್ನರ್ ಅಪ್ ಆಗಿದ್ದರೆ, ಡೊಮಿನಿಕನ್ ರಿಪಬ್ಲಿಕ್ ನ ಆಂಡ್ರೇನಾ ಮಾರ್ಟಿನೆಜ್ 71 ನೇ ವಿಶ್ವ ಸುಂದರಿ ಸ್ಪರ್ಧೆಯ ಎರಡನೇ ರನ್ನರ್ ಅಪ್ ಆಗಿದ್ದಾರೆ.
ಇದನ್ನೂ ಓದಿ:ಪೋಖರಾದಲ್ಲಿ ಹೊತ್ತಿ ಉರಿದ ವಿಮಾನ: 45ಕ್ಕೂ ಹೆಚ್ಚು ಜನರ ದುರಂತ ಅಂತ್ಯ
ಭಾರತ, ಪೋರ್ಟೊ ರಿಕೊ, ಡೊಮಿನಿಕನ್ ರಿಪಬ್ಲಿಕ್, ಲಾವೋಸ್, ಆಸ್ಟ್ರೇಲಿಯಾ, ಹೈಟಿ, ದಕ್ಷಿಣ ಆಫ್ರಿಕಾ, ಪೋರ್ಚುಗಲ್, ಕೆನಡಾ, ಪೆರು, ಟ್ರಿನಿಡಾಡ್ ಆ್ಯಂಡ್ ಟೊಬಾಗೊ, ಕೊಲಂಬಿಯಾ, ಯುನೈಟೆಡ್ ಸ್ಟೇಟ್ಸ್, ಸ್ಪೇನ್ ಮತ್ತು ವೆನೆಜುವೆಲಾದ ರೂಪದರ್ಶಿಗಳು ಫೈನಲ್ ತಲುಪಿದ್ದರು.
ಕರ್ನಾಟಕದ ದಿವಿತಾ ರೈ ಅವರು ಭಾರತವನ್ನು ಈ ಬಾರಿ ಪ್ರತಿನಿಧಿಸಿದ್ದರು. ದಿವಿತಾ ರೈ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಮತ್ತು ರೂಪದರ್ಶಿ. ಅವರು ಮುಂಬೈನಲ್ಲಿ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದಿದ್ದಾರೆ. ಅವರು ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಚಿತ್ರಕಲೆ, ಸಂಗೀತ, ಕ್ರೀಡೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.