Advertisement

RBI: ಯುಪಿಐ ಸಾಲ ನೀಡುವ ಅಧಿಕಾರ ಸಣ್ಣ ಹಣಕಾಸು ಬ್ಯಾಂಕ್‌ಗೂ ವಿಸ್ತರಣೆ

03:56 AM Dec 08, 2024 | Team Udayavani |

ಹೊಸದಿಲ್ಲಿ: ಯುಪಿಐ ಮೂಲಕ ಸಾಲ ನೀಡುವ ಅಧಿಕಾರವನ್ನು ಸಣ್ಣ ಹಣಕಾಸು ಬ್ಯಾಂಕ್‌ಗಳಿಗೂ ಆರ್‌ಬಿಐ ಶುಕ್ರವಾರ ವಿಸ್ತರಣೆ ಮಾಡಿದೆ.

Advertisement

ಈ ಮೊದಲು ದೊಡ್ಡ ವಾಣಿಜ್ಯ ಬ್ಯಾಂಕ್‌ಗಳಿಗೆ ಮಾತ್ರ ಈ ಅವಕಾಶ ನೀಡಲಾಗಿತ್ತು. ಯುಪಿಐ ಮೂಲಕ ಸಾಲ ನೀಡುವ ಯೋಜನೆಯನ್ನು 2023ರ ಸೆಪ್ಟಂಬರ್‌ನಲ್ಲಿ ಆರ್‌ಬಿಐ ಆರಂಭಿಸಿತ್ತು. ಇದು ಗ್ರಾಹಕರಿಗೆ ಸುಲಭವಾಗಿ ಹಣ ಒದಗಿಸುವುದಲ್ಲದೇ, ಹೆಚ್ಚಿನ ದಾಖಲೆಗಳ ಆವಶ್ಯಕತೆ ಇಲ್ಲದೇ ಔಪಚಾರಿಕ ಸಾಲವನ್ನು ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಜಾರಿಗೆ ತರಲಾಗಿತ್ತು.

ಅಲ್ಲದೇ ಈ ಸಾಲದ ಮರುಪಾವತಿ ಯನ್ನು ಯುಪಿಐ ಮೂಲಕವೇ ಮಾಡಲು ಅವಕಾಶ‌ ಒದಗಿಸಲಾಗಿತ್ತು. ದೊಡ್ಡ ಬ್ಯಾಂಕ್‌ಗಳು ಈಗಾಗಲೇ ಯುಪಿಐ ಬಳಕೆ ಮಾಡುವ ಆ್ಯಪ್‌ಗ್ಳ ಮೂಲಕ ಗ್ರಾಹಕರಿಗೆ ಸಾಲ ಒದಗಿಸುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next