Advertisement

ಶೀಘ್ರವೇ ನೂರರ ಹೊಸ ನೋಟು; ಹಳೇ ನೋಟು ಮುಂದುವರಿಯಲಿವೆ:RBI

11:22 AM Feb 04, 2017 | udayavani editorial |

ಮುಂಬಯಿ : 2005ರ ಮಹಾತ್ಮ ಗಾಂಧಿ ಸರಣಿಯ 100 ರೂ. ನೋಟುಗಳ ವಿನ್ಯಾಸದಲ್ಲೇ ಆರ್‌ಬಿಐ ಹೊಸ 100 ರೂ.ಗಳ ನೋಟುಗಳನ್ನು ಶೀಘ್ರದಲ್ಲೇ ಚಲಾವಣೆಗೆ ತರಲಿದೆ. ಆದರೆ ಹಳೇ ನೂರು ರೂ. ನೋಟುಗಳು ಅಂತೆಯೇ ಚಲಾವಣೆಯಲ್ಲಿ ಮುಂದುವರಿಯಲಿವೆ. 

Advertisement

ಹೊಸ ನೂರು ರೂ. ನೋಟಿನಲ್ಲಿ ನಂಬರ್‌ ಇರುವ ಸ್ಥಳದಲ್ಲಿ ಆರ್‌ ಎಂಬ ಅಕ್ಷರವನ್ನು  ಮತ್ತು ಆರ್‌ಬಿಐ ಗವರ್ನರ್‌ ಡಾ. ಊರ್ಜಿತ್‌ ಪಟೇಲ್‌ ಅವರ ಸಹಿಯನ್ನು ಮುದ್ರಿಸಲಾಗಿದೆ ಎಂದು ಆರ್‌ಬಿಐ ಹೊರಡಿಸಿರುವ ಪ್ರಕಟನೆ ತಿಳಿಸಿದೆ. 

ಹೊಸ ನೂರು ರೂಪಾಯಿ ನೋಟಿನ ಮುದ್ರಣ ಇಸವಿಯನ್ನು 2017 ಎಂದು ಹಿಂಭಾಗದಲ್ಲಿ  ಕಾಣಿಸಲಾಗಿದೆ. ಹೊಸ ನೋಟಿನ ನಂಬರ್‌ಗಳ ಗಾತ್ರವು ಎಡದಿಂದ ಬಲಕ್ಕೆ ದೊಡ್ಡದಾಗುತ್ತಾ ಹೋಗುವಂತೆ ಕಾಣಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next