Advertisement

ಪಕ್ವ ಎಫ್ಡಿ ಹಿಂಪಡೆಯದಿದ್ದರೆ ಬಡ್ಡಿ ನಷ್ಟ: ಆರ್‌ಬಿಐ ನಿಯಮ

01:19 AM Jul 06, 2021 | Team Udayavani |

ಹೊಸದಿಲ್ಲಿ: ನಿಶ್ಚಿತ ಠೇವಣಿ/ಅವಧಿ ಠೇವಣಿಗೆ ಸಂಬಂಧಿಸಿದ ನಿಯಮಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬದಲಾವಣೆ ತಂದಿದ್ದು, ಮೆಚ್ಯೂರಿಟಿ ಅವಧಿ ಮುಗಿದರೂ ಎಫ್ಡಿ ಮೊತ್ತ ವಿತ್‌ಡ್ರಾ ಮಾಡದೆ ಇದ್ದರೆ ಗ್ರಾಹಕರಿಗೆ ಬಡ್ಡಿ ನಷ್ಟವಾಗುವುದು ಖಚಿತ ಎಂದು ಹೇಳಿದೆ.

Advertisement

ಅವಧಿ ಠೇವಣಿ (ಟಿಡಿ) ಪಕ್ವವಾಗಿದ್ದರೂ ಅದರ ಮೊತ್ತ ಇನ್ನೂ ಗ್ರಾಹಕರಿಗೆ ಪಾವತಿ ಆಗಿರದೆ ಇದ್ದರೆ ಬ್ಯಾಂಕ್‌ ನಲ್ಲಿ ಉಳಿದಿರುವ ಆ ಮೊತ್ತಕ್ಕೆ ಉಳಿತಾಯ ಖಾತೆಗೆ ನೀಡಲಾಗುವ ಬಡ್ಡಿ ಯಾ ಟಿಡಿಯ ಕನಿಷ್ಠ ಬಡ್ಡಿದರ -ಈ ಎರಡರಲ್ಲಿ ಯಾವುದು ಕಡಿಮೆಯೋ ಅದು ಅನ್ವಯವಾಗುತ್ತದೆ ಎಂದು ಆರ್‌ ಬಿಐ ಹೇಳಿದೆ.

ಈ ನಿಯಮವು ವಾಣಿಜ್ಯ ಬ್ಯಾಂಕ್‌, ಸಣ್ಣ ಹಣಕಾಸು ಬ್ಯಾಂಕ್‌, ನಗರ ಸಹಕಾರಿ ಬ್ಯಾಂಕ್‌ಗಳು, ಸ್ಥಳೀಯ ಪ್ರಾದೇಶಿಕ ಬ್ಯಾಂಕ್‌ಗಳು, ರಾಜ್ಯ ಸಹಕಾರಿ ಬ್ಯಾಂಕ್‌ ಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಸಹಿತ ಎಲ್ಲ ರೀತಿಯ ಬ್ಯಾಂಕ್‌ ಗಳಿಗೂ ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next