Advertisement

ಸಾಲದ ಆ್ಯಪ್‌ ಗಳಿಗೆ ಲಗಾಮು; ಆರ್‌ಬಿಐ ಮಾರ್ಗಸೂಚಿ ಬಿಡುಗಡೆ

12:16 AM Aug 11, 2022 | Team Udayavani |

ಡಿಜಿಟಲ್‌ ಲೆಂಡಿಂಗ್‌ ಅಪ್ಲಿಕೇಶನ್‌ಗಳಿಂದಾಗಿ ಆಗುತ್ತಿರುವ ಅನಾಹುತಗಳನ್ನು ತಡೆಯಲು, ನಿಗಾ ಇಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾರ್ಗಸೂಚಿ ಬಿಡುಗಡೆ ಮಾಡಿದೆ.

Advertisement

ವರ್ಕಿಂಗ್‌ ಗ್ರೂಪ್‌ ಆನ್‌ ಡಿಜಿಟಲ್‌ ಲೆಂಡಿಂಗ್‌ ಕಂಪೆನಿಗಳು ಸಲ್ಲಿಸಿದ್ದ ಮನವಿ ಮೇರೆಗೆ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ಡಿಜಿಟಲ್‌ ಸಾಲ ವಿತರಿಸುವ ಕೆಲವು ಕಂಪೆನಿಗಳ ಮಾನಸಿಕ ಹಿಂಸೆಯಿಂದ ಕೆಲವು ಗ್ರಾಹಕರು ಆತ್ಮಹತ್ಯೆಗೆ ಶರಣಾಗಿದ್ದರು.

ನಿಯಮಗಳೇನು?
-ಎಲ್ಲ ರೀತಿಯ ಡಿಜಿಟಲ್‌ ಸಾಲಗಳು ಹಾಗೂ ಸಾಲ ಮರುಪಾವತಿಯು, ಸಾಲ ನೀಡುವವರ, ಪಡೆಯುವವರ ಹಾಗೂ ಬ್ಯಾಂಕ್‌ ಖಾತೆಗಳ ಮಧ್ಯೆ ನಡೆಯಬೇಕು. ಲೆಂಡಿಂಗ್‌ ಸರ್ವೀಸ್‌ ಪ್ರೊವೈಡರ್‌ಗಳ (ಎಲ್‌ಬಿಎಸ್‌) ಪೂಲ್‌ ಖಾತೆಗಳು ಅಥವಾ ಯಾವುದೇ ಮಧ್ಯವರ್ತಿ (ಥರ್ಡ್‌ ಪಾರ್ಟಿ) ಮೂಲಕ ನಡೆಯುವಂತಿಲ್ಲ.

-ಕ್ರೆಡಿಟ್‌ ಇಂಟರ್‌ಮೀಡಿಯೇಟ್‌ ಪ್ರೊಸೆಸ್‌ನಡಿ ಎಲ್‌ಬಿಎಸ್‌ಗಳ ಮೇಲೆ ವಿಧಿಸುವ ಶುಲ್ಕವನ್ನು ಆಯಾ ಕಂಪೆನಿ ಕಟ್ಟಬೇಕೇ ಹೊರತು, ಗ್ರಾಹಕರ ಮೇಲೆ ಹೇರುವಂತಿಲ್ಲ.

-ಗ್ರಾಹಕನಿಗೆ ಸಾಲ ನೀಡುವ ಕಂಪೆನಿಯು ಪ್ರಮಾಣೀಕೃತವಾದ ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್‌ನ್ನು ಕಡ್ಡಾಯವಾಗಿ ನೀಡಬೇಕು.

Advertisement

-ಸಾಲದ ಬಗೆಗಿನ ಎಲ್ಲ ಮಾಹಿತಿಯನ್ನು ಸಾಲ ನೀಡುವ ಮೊದಲೇ ಗ್ರಾಹಕರಿಗೆ ತಿಳಿಸಬೇಕು.

-ಗ್ರಾಹಕರ ಒಪ್ಪಿಗೆಯಿಲ್ಲದೆ ಸ್ವಯಂಚಾಲಿತವಾಗಿ ಕ್ರೆಡಿಟ್‌ ಲಿಮಿಟ್‌ ಹೆಚ್ಚಿಸುವಂತಿಲ್ಲ.

-ಪಡೆದ ಸಾಲವನ್ನು ನಿಗದಿತ ಅವಧಿಗಿಂತ ಮೊದಲು ಬಡ್ಡಿ ಸಹಿತ ತೀರಿಸುವ ಸೌಲಭ್ಯವನ್ನು ಗ್ರಾಹಕರಿಗೆ ಕಡ್ಡಾಯವಾಗಿ ನೀಡಬೇಕು.

-ಸಾಲ ಪಡೆದ ಗ್ರಾಹಕರು ನಿಗದಿತ ಅವಧಿಯಲ್ಲಿ ಸಾಲ ಹಿಂದಿರುಗಿಸದೇ ಇದ್ದಲ್ಲಿ ಕ್ರೆಡಿಟ್‌ ಸಿಐಸಿ ಎಂಬ ನಿಯಂತ್ರಣ ಪ್ರಾಧಿಕಾರಕ್ಕೆ ಆಯಾ ಕಂಪೆನಿಯು ದೂರು ಕೊಡಬೇಕು.

ಗ್ರಾಹಕರು ಕಂಪೆನಿಯಲ್ಲಿ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಗಿರುವ ತೊಂದರೆಯ ಬಗ್ಗೆ ದೂರು ಕೊಟ್ಟರೆ ಅದನ್ನು 30 ದಿನಗಳಲ್ಲಿ ಬಗೆಹರಿ ಸಬೇಕು. ಅಲ್ಲಿ ಸಮಸ್ಯೆ ಇತ್ಯರ್ಥ ವಾಗದಿದ್ದರೆ, ಆರ್‌ಬಿಐ ನಿಯಂತ್ರಣ ದಲ್ಲಿರುವ ಇಂಟಿಗ್ರೇಟೆ ಡ್‌ ಒಂಬುಡ್ಸ್‌ ಮನ್‌ ಸ್ಕೀಂ (ಆರ್‌ಬಿ- ಐಒಎಸ್‌)ಗೆ ದೂರು ಸಲ್ಲಿಸಬಹುದು.

-ಆ್ಯಪ್‌ ತಮಗೆ ಅಗತ್ಯವಿದ್ದಷ್ಟೇ ಮಾಹಿತಿ ಯನ್ನು ಆಯಾ ಗ್ರಾಹಕರ ಒಪ್ಪಿಗೆ ಪಡೆದೇ ಸಂಗ್ರಹಿಸಬೇಕು. ಈ ದತ್ತಾಂಶ ಬಳಸುವ ಮೊದಲು ಗ್ರಾಹಕರ ಒಪ್ಪಿಗೆ ಪಡೆಯಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next