ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತನ್ನ ಪ್ರಮುಖ ಬಡ್ಡಿ ದರವನ್ನು ಶೇ.0.25ರಷ್ಟು ಕಡಿತಗೊಳಿಸಿ ಶೇ.6.25ಕ್ಕೆ ನಿಗದಿಸಿದೆ. ಇದರ ಪರಿಣಾಮವಾಗಿ ಗೃಹ, ಮೋಟಾರು ವಾಹನ ಸಾಲಗಳು ಅಗ್ಗವಾಗಲಿವೆ.
ಊರ್ಜಿತ್ ಪಟೇಲ್ ನಿರ್ಗಮನದ ಬಳಿಕದಲ್ಲಿ ಇದೇ ಮೊದಲ ಬಾರಿಗೆ ದ್ವೆ„ಮಾಸಿಕ ನೀತಿ ಪರಾಮರ್ಶೆ ವರದಿಯನ್ನು ಪ್ರಕಟಿಸಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ‘ಬಡ್ಡಿ ದರ ಇಳಿಸುವ ಈ ನಿರ್ಧಾರವು ಆರು ಸದಸ್ಯರನ್ನು ಒಳಗೊಂಡ ಹಣಕಾಸು ನೀತಿ ಸಮಿತಿಯ ಸರ್ವಾನುಮತದ ನಿರ್ಧಾರವಾಗಿದೆ’ ಎಂದು ಹೇಳಿದರು.
ಶೇ.0.25ರಷ್ಟು ಬಡ್ಡಿ ದರವನ್ನು ಆರ್‌ಬಿಐ ಇಳಿಸಿ ಶೇ.6.25ಕ್ಕೆ ನಿಗದಿಸಿರುವ ಪರಿಣಾಮವಾಗಿ ಗೃಹ, ಮೋಟಾರು ವಾಹನ ಸಾಲ ಪಡೆಯುವ ಆಕಾಂಕ್ಷಿಗಳ ಇಎಂಐ ಹೊರೆ ಕಡಿಮೆಯಾಗಲಿದೆ ಎಂದು ದಾಸ್ ಹೇಳಿದರು. ಆರ್ ಬಿ ಐ ನ ಈ ದರ ಇಳಿಕೆ ನೀತಿಯನ್ನು ಅನುಸರಿಸಿ ಬ್ಯಾಂಕುಗಳ ತಾವು ನೀಡುವ ಗೃಹ, ಮೋಟಾರು ವಾಹನಗಳ ಸಾಲದ ಮೇಲಿನ ಬಡ್ಡಿಯು ಕಡಿಮೆಯಾಗಲಿದೆ ಎಂದವರು ಹೇಳಿದರು.
ಆರ್ ಬಿ ಐ ಇಳಿಸಿರುವ ಬಡ್ಡಿ ದರದ ಪರಿಣಾಮ ರಿವರ್ಸ್ ರಿಪೋ ದರ ಕೂಡ ಶೇ.0.25ರಷ್ಟು ಕಡಿಮೆಯಾಗಿ ಶೇ.6ಕ್ಕೆ ಇಳಿದಿದೆ.
ಆರ್ ಬಿ ಐ ತನ್ನ ಬಡ್ಡಿದರವನ್ನು ಎರಡು ಬಾರಿ ಶೇ.0.25ರಷ್ಟು ಏರಿಸಿದ ಬಳಿಕದಲ್ಲಿ ನಡೆದಿದ್ದ ಕಳೆದ ಮೂರು ದ್ವೆ„ಮಾಸಿಕ ನೀತಿ ಪರಾಮರ್ಶೆಯಲ್ಲಿ ತನ್ನ ಬಡ್ಡಿ ದರಗಳನ್ನು ಯಥಾವತ್ ಉಳಿಸಿಕೊಂಡಿತ್ತು.