ನವದೆಹಲಿ: ಸತತ ಒಂಬತ್ತನೇ ಬಾರಿಯೂ ಶೇ.4ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧರಿಸಿರುವುದಾಗಿ ಬುಧವಾರ(ಡಿಸೆಂಬರ್ 08) ಘೋಷಿಸಿದ್ದಾರೆ.
ಇದನ್ನೂ ಓದಿ:ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅನ್ಯೋನ್ಯತೆಯಿದೆ: ಸಿದ್ದರಾಮಯ್ಯ
ಪ್ರಸ್ತುತ ಇರುವ ಶೇ.4ರ ಬಡ್ಡಿದರವನ್ನೇ (ರೆಪೋ) ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ದಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅದೇ ರೀತಿ ರಿವರ್ಸ್ ರೆಪೋ ದರವನ್ನು ಶೇ.3.35ರಲ್ಲಿ ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
2021-22ನೇ ಆರ್ಥಿಕ ವರ್ಷದಲ್ಲಿ ಶೇ.9.5ರಷ್ಟು ಜಿಡಿಪಿ ಬೆಳವಣಿಗೆಯ ಗುರಿ ಹೊಂದಲಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ.6.6 ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.6ರಷ್ಟು ಜಿಡಿಪಿ ಬೆಳವಣಿಗೆ ಒಳಗೊಂಡಿರುವುದಾಗಿ ಶಕ್ತಿಕಾಂತ್ ದಾಸ್ ವಿವರಿಸಿದ್ದಾರೆ.
ಪ್ರಸಕ್ತ ಹಣಕಾಸಿನ ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರ ತೀವ್ರ ಏರಿಕೆ ಕಂಡಿರುವುದಾಗಿ ತಿಳಿಸಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಮುಂದಿನ ಹಣಕಾಸು ವರ್ಷದಲ್ಲಿ ಶೇ.5.3ರಷ್ಟು ಹಣದುಬ್ಬರದ ಗುರಿ ಇರಿಸಿಕೊಳ್ಳಲಾಗಿದೆ ಎಂದರು.