Advertisement

RBI: ಬಡ್ಡಿದರ ಯಥಾಸ್ಥಿತಿ?

10:04 PM Jul 30, 2023 | Team Udayavani |

ನವದೆಹಲಿ: ದೇಶದ ಕೇಂದ್ರ ಬ್ಯಾಂಕ್‌ ಆರ್‌ಬಿಐ ತನ್ನ ಮುಖ್ಯ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲುಳಿಸಿಕೊಳ್ಳುವ ದಟ್ಟ ಸಾಧ್ಯತೆಯಿದೆ. ಸತತ ಮೂರನೇ ಬಾರಿಗೂ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲವೆಂದು ಮೂಲಗಳು ಹೇಳಿವೆ. ಅಮೆರಿಕ ಮತ್ತು ಯೂರೋಪ್‌ಗ್ಳಲ್ಲಿ ಹಣದುಬ್ಬರ ಜಾಸ್ತಿಯಿರುವುದರಿಂದ ಬಡ್ಡಿದರಗಳನ್ನು ಏರಿಸಲಾಗಿದೆ. ಹಾಗಿದ್ದರೂ ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಆರ್‌ಬಿಐ ಯಾವುದೇ ವ್ಯತ್ಯಾಸ ಮಾಡುವ ಸಾಧ್ಯತೆಯಿಲ್ಲ.

Advertisement

ಸದ್ಯದಲ್ಲೇ ಆರ್‌ಬಿಐ ದ್ವೆ„ಮಾಸಿಕ ನೀತಿ ಪರಿಶೀಲನಾ ಸಭೆಯಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಳೆದ ವರ್ಷ ಮೇ ತಿಂಗಳಿನಿಂದ ಸಾಲದ ಮೇಲಿನ ಹೊರೆ ಏರುತ್ತಲೇ ಇತ್ತು. ಆರ್‌ಬಿಐ ರೆಪೋ ದರವನ್ನು ಫೆಬ್ರವರಿ ನಂತರ ಶೇ.6.5ರಲ್ಲೇ ಸ್ಥಿರೀಕರಿಸಿದ ನಂತರ ಪರಿಸ್ಥಿತಿಯೂ ಸ್ಥಿರವಾಯಿತು. ಅದಕ್ಕೂ ಮುನ್ನ ರೆಪೋ ದರ ಶೇ.6.25 ಇತ್ತು. ಈ ಹಿಂದೆ ಏಪ್ರಿಲ್‌ ಮತ್ತು ಜೂನ್‌ನಲ್ಲಿ ನಡೆಸಿದ ಪರಿಶೀಲನೆಯಲ್ಲೂ ಆರ್‌ಬಿಐ ಮಹತ್ವದ ಬದಲಾವಣೆಗೆ ಕೈಹಾಕಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next