ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ) ಪ್ರಮಾಣವನ್ನು ಶೇ. 9.5ಕ್ಕೆ ಕೊಂಡೊಯ್ಯುವ ಬಗ್ಗೆ ತಾನು ಹೊಂದಿರುವ ಗುರಿ, ಕ್ರಮೇಣ ಸಾಕಾರಗೊಳ್ಳುತ್ತಿದೆ ಎಂಬ ಆಶಾವಾದವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಇದರ ಜೊತೆಗೆ, ಇದೇ ಹಣಕಾಸು ವರ್ಷಾಂತ್ಯದ ಹೊತ್ತಿಗೆ ದೇಶದ ಹಣದುಬ್ಬರ ಪ್ರಮಾಣವನ್ನು ಶೇ. 4ಕ್ಕೆ ಇಳಿಸುವ ಬಗ್ಗೆಯೂ ನಾವು ನಿರೀಕ್ಷೆ ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ, ಹಣದುಬ್ಬರ ಪ್ರಮಾಣವನ್ನು ಶೇ. 2ರಿಂದ 6ರೊಳಗೆ ತಂದು ನಿಲ್ಲಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು. ಈಗ, ಕೊರೊನಾ ಭೀತಿ ನಿವಾರಣೆಯಾಗಿ ದೇಶೀಯ ವಾಣಿಜ್ಯ ಚಟುವಟಿಕೆಗಳು ಹೊಸ ಹುರುಪಿನಿಂದ ಮುನ್ನುಗ್ಗುತ್ತಿರುವುದರಿಂದ ಈ ಹಣದುಬ್ಬರ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ನಿಂತಿದ್ದ ಟ್ರಕ್ಕಿನಿಂದ ಬಿದ್ದ ಚಾಲಕ-ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ
ಕೋವಿಡ್ ದಿಂದಾದ ನಷ್ಟದಿಂದಾಗಿ ಹಣದುಬ್ಬರ ಪ್ರಮಾಣ ಶೇ. 6 ದಾಟಿತ್ತು. ಹಾಗಾಗಿ, ಇತ್ತೀಚೆಗೆ, ಆರ್‌ಬಿಐ ತನ್ನ ನಿಯಮಾವಳಿಗಳನ್ನು ಪರಿಷ್ಕರಣೆ ಮಾಡಿರಲಿಲ್ಲ.