Advertisement

Paytm ಪೇಮೆಂಟ್ಸ್‌ ಬ್ಯಾಂಕ್‌ಗೆ ನಿರ್ಬಂಧ ವಿಧಿಸಿದ ಆರ್‌ಬಿಐ

02:01 AM Feb 01, 2024 | Team Udayavani |

ಮುಂಬಯಿ: ಫೆ.29ರ ಅನಂತರ ಪೇಟಿಎಂ ಗ್ರಾಹಕರ ಪ್ರೀಪೇಯ್ಡ ಪೇಮೆಂಟ್‌, ವಾಲೆಟ್‌, ಫಾಸ್ಟ್‌ಟ್ಯಾಗ್‌ ಖಾತೆಗಳಿಗೆ ಯಾವುದೇ ಠೇವಣಿ ಅಥವಾ ಟಾಪ್‌-ಅಪ್‌ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ಗೆ ಬುಧವಾರ

Advertisement

ಆರ್‌ಬಿಐ ನಿರ್ಬಂಧ ವಿಧಿಸಿದೆ. ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ನ‌ ಸಮಗ್ರ ಆಡಿಟ್‌ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರಿಂದ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಆರ್‌ಬಿಐ ಈ ಕ್ರಮವನ್ನು ಕೈಗೊಂಡಿದೆ. “ಯಾವುದೇ ಪೇಟಿಎಂ ಗ್ರಾಹಕರ ಖಾತೆ, ಪ್ರೀಪೇಯ್ಡ ಪೇಮೆಂಟ್‌, ವಾಲೆಟ್‌, ಫಾಸ್ಟ್‌ಟ್ಯಾಗ್‌, ಎಸಿಎಂಸಿ ಕಾರ್ಡ್‌, ಇತರೆ ಖಾತೆಗಳಲ್ಲಿ ಫೆ.29ರಿಂದ ಬಡ್ಡಿ, ಕ್ಯಾಶ್‌ಬ್ಯಾಕ್‌ ಅಥವಾ ಮರುಪಾವತಿ ಹೊರತುಪಡಿಸಿ ಠೇವಣಿ, ಸಾಲದ ವ್ಯವಹಾರ, ಟಾಪ್‌ ಅಪ್‌ ವ್ಯವಹಾರ ಮಾಡದಂತೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ಗೆ ನಿರ್ಬಂಧ ವಿಧಿಸಲಾಗಿದೆ’ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next