ವಿಪಕ್ಷಗಳ ಆರೋಪಗಳಿಗೆ ಸರಕಾರವಾಗಲೀ, ಬಿಜೆಪಿ ನಾಯಕರಾಗಲೀ ಯಾವುದೇ ಪ್ರತ್ರಿಕ್ರಿಯೆ ನೀಡಿಲ್ಲ. ಆದರೆ, ಊರ್ಜಿತ್ ಪಟೇಲ್ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರು ಟ್ವೀಟ್ ಮಾಡಿದ್ದಾರೆ.
Advertisement
ಊರ್ಜಿತ್ ರಾಜೀನಾಮೆ ಬಳಿಕ ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ ಮೋದಿ, ಹಳಿತಪ್ಪಿದ್ದ ಬ್ಯಾಂಕಿಂಗ್ ವ್ಯವಸ್ಥೆ ಯನ್ನು ಊರ್ಜಿತ್ ಪಟೇಲ್ ಅವರು ಸರಿದಾರಿಗೆ ತಂದಿದ್ದಾರೆ. ಅಲ್ಲದೆ, ವ್ಯವಸ್ಥೆಯಲ್ಲಿ ಶಿಸ್ತು ಮೂಡುವಂತೆ ಮಾಡಿದ್ದಾರೆ. ಆರ್ಥಿಕ ವಿಚಾರಗಳನ್ನು ಅರೆದು ಕುಡಿದಿರುವಂಥ ಶ್ರೇಷ್ಠ ವ್ಯಕ್ತಿ. ಅವರ ನಾಯಕತ್ವ ದಲ್ಲಿ ಆರ್‌ಬಿಐ ಆರ್ಥಿಕ ಸ್ಥಿರತೆಯನ್ನು ಸಾಧಿಸಿತು ಎಂದು ಹೊಗಳಿದ್ದಾರೆ. ಅಲ್ಲದೆ, ಅವರನ್ನು ನಾವು ತುಂಬಾ ಮಿಸ್ ಮಾಡಿ ಕೊಳ್ಳುತ್ತೇವೆ ಎಂದೂ ಹೇಳಿದ್ದಾರೆ.
Related Articles
ಆರ್‌ಬಿಐ ಗವರ್ನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಕ್ಷಣದಲ್ಲಿಯೇ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ಅವರೂ ಹುದ್ದೆ ತ್ಯಜಿಸಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್‌ಬಿಐ ವಕ್ತಾರರು, “ಇದೊಂದು ಆಧಾರ ರಹಿತ ಸುದ್ದಿ’ ಎಂದು ಹೇಳಿದ್ದಾರೆ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದಾರೆ.
Advertisement
ಊರ್ಜಿತ್ ಪಟೇಲ್ ಅವರ ರಾಜೀನಾಮೆಯಿಂದ ಅಚ್ಚರಿ ಹಾಗೂ ಆಘಾತವಾಗಿದೆ. ಇದೊಂದು ದೊಡ್ಡ ಹಿನ್ನಡೆ. ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.ಎಸ್. ಗುರುಮೂರ್ತಿ,
ಆರ್‌ಬಿಐ ಸ್ವತಂತ್ರ ನಿರ್ದೇಶಕ ದೇಶದ ಪ್ರಗತಿ ಅಥವಾ ಸುಸ್ಥಿರ ಅಭಿವೃದ್ಧಿಗೆ ಸಂಸ್ಥೆಗಳ ಬಲಿಷ್ಠತೆಯು ಅತ್ಯಂತ ಮುಖ್ಯ. ಹಾಗಾಗಿ ಊರ್ಜಿತ್ ಪಟೇಲ್‌ರ ರಾಜೀನಾಮೆಯು ಪ್ರತಿಯೊಬ್ಬ ಭಾರತೀಯನೂ ಕಳವಳ ಪಡುವಂಥ ವಿಷಯ.
ರಘುರಾಂ ರಾಜನ್,
ಆರ್‌ಬಿಐ ಮಾಜಿ ಗವರ್ನರ್