Advertisement

ಆರ್‌ಬಿಐ ಗವರ್ನರ್‌ ವೇತನ 3 ಪಟ್ಟು ಹೆಚ್ಚಳ

12:44 PM Apr 03, 2017 | Karthik A |

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಊರ್ಜಿತ್‌ ಪಟೇಲ್‌ ಹಾಗೂ ಉಪಗವರ್ನರ್‌ಗಳಿಗೆ ಕೇಂದ್ರ ಸರಕಾರ ಬಂಪರ್‌ ಕೊಡುಗೆಯನ್ನೇ ನೀಡಿದೆ. ಅವರ ಮೂಲ ವೇತನವನ್ನು ಮೂರು ಪಟ್ಟು ಹೆಚ್ಚಳ ಮಾಡಿದ್ದು, 2016ರ ಜನವರಿ 1ರಿಂದಲೇ ಅನ್ವಯವಾಗುವಂತೆ ಪರಿಷ್ಕೃತ ವೇತನ ಜಾರಿಯಾಗಲಿದೆ. ಇತ್ತೀಚೆಗಷ್ಟೇ ಕೇಂದ್ರ ಸರಕಾರ ಜಡ್ಜ್ ಗಳ ವೇತನವನ್ನು ಶೇ.200ರಷ್ಟು ಹೆಚ್ಚಳ ಮಾಡಿತ್ತು.

Advertisement

ಪರಿಷ್ಕರಣೆಯಿಂದಾಗಿ ಇನ್ನು ಮುಂದೆ ಗವರ್ನರ್‌ ಪಟೇಲ್‌ ಅವರು ಮಾಸಿಕ 2.50 ಲಕ್ಷ ರೂ. ವೇತನ ಪಡೆದರೆ, ಉಪಗವರ್ನರ್‌ 2.25 ಲಕ್ಷ ರೂ. ಪಡೆಯಲಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ. ಈ ಹಿಂದೆ ಪಟೇಲ್‌ ಅವರು ಮೂಲ ವೇತನದ ರೂಪದಲ್ಲಿ 90 ಸಾವಿರ ರೂ., ತುಟ್ಟಿ ಭತ್ಯೆ 1.12 ಲಕ್ಷ ರೂ. ಮತ್ತು ಇತರ ಪಾವತಿಯ ರೂಪದಲ್ಲಿ 7 ಸಾವಿರ ರೂ. ಪಡೆಯುತ್ತಿದ್ದರು. ಅದರಂತೆ, ಅವರ ಒಟ್ಟು ವೇತನ 2.09 ಲಕ್ಷ  ರೂ. ಆಗಿತ್ತು. ಈಗ ಮೂಲ ವೇತನದಲ್ಲೇ ಹೆಚ್ಚಳವಾಗಿರುವ ಕಾರಣ, ಅವರ ಒಟ್ಟು ವೇತನ 3.70 ಲಕ್ಷ ರೂ. ಆಗಲಿದೆ. 2016ರ ಸೆಪ್ಟಂಬರ್‌ನಲ್ಲಿ ಆರ್‌ಬಿಐ ಗವರ್ನರ್‌ ಹುದ್ದೆ ಅಲಂಕರಿಸಿದ ಊರ್ಜಿತ್‌ ಪಟೇಲ್‌ ಅವರು ಅಕ್ಟೋಬರ್‌ನಲ್ಲಿ 2.09 ಲಕ್ಷ ರೂ. ವೇತನ ಪಡೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next