Advertisement
2018-19ನೇ ಸಾಲಿನಿಂದ ರಾಜ್ಯಗಳು ನೀಡಿದ ಸಬ್ಸಿಡಿ ಪ್ರಮಾಣ 2.5 ಪಟ್ಟು ಹೆಚ್ಚಾಗಿ, 4.7 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.ಕೆಲವು ರಾಜ್ಯಗಳಲ್ಲಿ ಬಂಡವಾಳ ವೆಚ್ಚಕ್ಕಿಂತ ರಾಜಸ್ವ ವೆಚ್ಚವೇ ಹೆಚ್ಚಿದ್ದು, ಪಂಜಾಬ್ನಲ್ಲಿ ಶೇ.17.1, ಪುದುಚೇರಿ ಶೇ.14.1, ಕೇರಳ ಶೇ.10.6, ದಿಲ್ಲಿಯಲ್ಲಿ ಶೇ.10.3 ಪ್ರಮಾಣದಲ್ಲಿದೆ.
ದೇಶದಲ್ಲಿ ಹೆಚ್ಚು ಸಬ್ಸಿಡಿ ನೀಡುವ ರಾಜ್ಯಗಳ ಪೈಕಿ ತಮಿಳುನಾಡು ಮೊದಲಿದೆ. ಇಲ್ಲಿ ಸಬ್ಸಿಡಿ 1.46 ಲಕ್ಷ ಕೋಟಿ ರೂ. ಇದೆ. 49,431 ಕೋಟಿ ರೂ. ಸಬ್ಸಿಡಿ ನೀಡಿ ಛತ್ತೀಸ್ಗಢ 2ನೇ ಸ್ಥಾನದಲ್ಲಿ, 47,400 ಕೋಟಿ ರೂ. ನೀಡಿ ಕರ್ನಾಟಕ 3ನೇ ಸ್ಥಾನದಲ್ಲಿದೆ.