ಮುಂಬಯಿ: ತಾಂತ್ರಿಕ ಕಾರಣಗಳಿಂದಾಗಿ ಎಟಿಎಂನಲ್ಲಿ ನಡೆ ಯುವ ವಿಫಲ ವಹಿವಾಟುಗಳನ್ನೂ ಉಚಿತ ವಹಿವಾಟುಗಳ ಅಡಿಯಲ್ಲಿ ಲೆಕ್ಕ ಮಾಡಬಾರದು ಎಂದು ಎಲ್ಲ ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಅಷ್ಟೇ ಅಲ್ಲ, ಬ್ಯಾಲೆನ್ಸ್ ಪರಿಶೀಲನೆ, ಹಣ ವರ್ಗಾವಣೆಯನ್ನೂ ಉಚಿತ ವಹಿವಾಟುಗಳ ಅಡಿಯಲ್ಲಿ ಲೆಕ್ಕ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಪ್ರತಿ ಖಾತೆಗೂ ಪ್ರತಿ ತಿಂಗಳು ನಿರ್ದಿಷ್ಟ ಸಂಖ್ಯೆಯ ಉಚಿತ ವಹಿವಾಟುಗಳನ್ನು ಎಟಿಎಂ ನಲ್ಲಿ ಒದಗಿಸಲಾಗುತ್ತದೆ. ಉಚಿತ ವಹಿವಾಟುಗಳು ಮುಗಿದ ನಂತರ ನಡೆಸಿದ ವಹಿವಾಟುಗಳಿಗೆ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತವೆ. ಆದರೆ ಎಟಿಎಂಗಳಲ್ಲಿ ಹಣ ಹಿಂಪಡೆಯುವಾಗ ತಾಂತ್ರಿಕ ಕಾರಣದಿಂದ ಹಣ ಬರದೇ ಇದ್ದಲ್ಲಿ, ಅದನ್ನೂ ಒಂದು ಉಚಿತ ವಹಿವಾಟು ಎಂದು ಪರಿಗಣಿಸಿದರೆ ಗ್ರಾಹಕ ರಿಗೆ ಒಟ್ಟು ಲಭ್ಯವಾಗುವ ಉಚಿತ ವಹಿವಾಟುಗಳ ಸಂಖ್ಯೆ ಕಡಿಮೆ ಯಾಗುತ್ತದೆ ಎಂಬ ಕಾರಣಕ್ಕೆ ಆರ್‌ಬಿಐ ಈ ಸೂಚನೆ ನೀಡಿದೆ.