ನವ ದೆಹಲಿ : “ವಂಚನೆಗಳು – ವರ್ಗೀಕರಣ ಮತ್ತು ರಿಪೋರ್ಟಿಂಗ್ ” ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಪ್ರಮುಖ ಎರಡು ಬ್ಯಾಂಕ್ ಗಳಿಗೆ ದಂಡ ವಿಧಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್, ದೇಶದ ಪ್ರಮುಖ ನಾಗರಿಕ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ದಂಡ ವಿಧಿಸಿದೆ.
ಇದನ್ನೂ ಓದಿ : ಕಲಾವತಿ ದಯಾನಂದ್ ಧ್ವನಿಯಲ್ಲಿ ‘ಸೋರುತಿಹುದು ಮನೆಯ ಮಾಳಿಗಿ
ವಂಚನೆಗಳು – ವರ್ಗೀಕರಣ ಮತ್ತು ರಿಪೋರ್ಟಿಂಗ್ ವಿಚಾರಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾಕ್ಕೆ ಬರೋಬ್ಬರಿ 4 ಕೋಟಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 2 ಕೋಟಿ ದಂಡ ವಿಧಿಸಿದೆ.
ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿರುದ್ಧ ವಂಚನೆಗಳು – ವರ್ಗೀಕರಣ ಮತ್ತು ರಿಪೋರ್ಟಿಂಗ್ ವಿಚಾರವಾಗಿ ಕ್ರಮ ಕೈಗೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್, 2019ರ ಮಾರ್ಚ್ 31 ರಂದು ಬ್ಯಾಂಕ್ ಆಫ್ ಇಂಡಿಯಾದ ಎಲ್ ಎಸ್ ಇ ಗಾಗಿ ಶಾಸನಬದ್ಧ ಪರಿಶೀಲನೆ ನಡೆಸಲಾಗಿದ್ದು, ಖಾತೆಯಲ್ಲಿನ ವಂಚನೆಯನ್ನು ಪತ್ತೆಹಚ್ಚಲು ಬ್ಯಾಂಕ್ ಪರಿಶೀಲನೆ ನಡೆಸಿ ವಂಚನೆ ಮಾನಿಟರಿಂಗ್ ವರದಿಯನ್ನು (ಎಫ್ ಎಂ ಆರ್) ಸಲ್ಲಿಸಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಬಾಟಲಿ ಒಳಗಿನ ರೋಗಾಣುಗಳನ್ನು ನಾಶಪಡಿಸಲಿದೆ, ಸೆಲ್ಫ್ ಕ್ಲೀನಿಂಗ್ ವಾಟರ್ ಬಾಟಲ್ಸ್!