Advertisement

ರಾಯಣ್ಣ ಮೂರ್ತಿ ತೆರವಿಗೆ ಆಕ್ರೋಶ : ಪೀರನವಾಡಿ ಘಟನೆ ಖಂಡಿಸಿ ಪ್ರತಿಭಟನೆ

02:11 PM Aug 20, 2020 | sudhir |

ವಿಜಯಪುರ: ಪೀರನವಾಡಿ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿರುವ ಬೆಳಗಾವಿ ಜಿಲ್ಲಾಡಳಿತದ ಕ್ರಮ ಖಂಡಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದವು.

Advertisement

ಕುರುಬರ ಸಂಘ: ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವು ಖಂಡಿಸಿ ಜಿಲ್ಲಾ ಕುರುಬರ ಸಂಘದ ನೇತೃತ್ವದಲ್ಲಿ ಪ್ರಗತಿಪರ, ಕನ್ನಡಪರ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ರಾಜು ಕಂಬಾಗಿ ಮಾತನಾಡಿ, ದೇಶದ 74ನೇ ಸ್ವಾತಂತ್ರ್ಯೋತ್ಸವ ದಿನದಂದು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನಗೈದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದೇ ಅವರದೇ ತವರು ನೆಲದಲ್ಲಿ ರಾಯಣ್ಣ ಪ್ರತಿಮೆ ತೆರವುಗೊಳಿಸಿ ಅವಮಾನ ಮಾಡಲಾಗಿದೆ. ರಾಯಣ್ಣ ಪ್ರತಿಮೆ ಸ್ಥಾಪಿಸಿದ ಸ್ಥಳದಲ್ಲಿ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ.

ಆದ್ದರಿಂದ ಸರಕಾರ ಕೂಡಲೇ ಮೊದಲಿನ ಸ್ಥಳದಲ್ಲೇ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಮರು ಸ್ಥಾಪಿಸಿ ಮಾಡಿರುವ
ಅಪಮಾನಕ್ಕೆ ಪಶ್ಚತ್ತಾಪ ಪಡಬೇಕು. ಈ ವಿಷಯದಲ್ಲಿ  ನಿರ್ಲಕ್ಷ್ಯ ತೋರಿದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಮೋಹನ ಮೇಟಿ, ರವಿ ಕಿತ್ತೂರ, ಎ.ಎಸ್‌. ಡೋಣೂರ, ಡಿ.ಬಿ. ಹಿರೇಕುರುಬರ, ಗುರನಗೌಡ ಪಾಟೀಲ, ಬಸವರಾಜ ಕಾತ್ರಾಳ, ಸದಾಶಿವ ಪೂಜಾರಿ, ಮೋಹನ ದಳವಾಯಿ, ಮಹಾಂತೇಶ ಹೊಸಮನಿ, ರಾಜು ಬಾಬಾನಗರ, ಮಲ್ಲು ಪರಸಣ್ಣವರ, ಪ್ರಕಾಶ
ಜಾಲಗೇರಿ, ಜಿ.ಎಸ್‌. ಕಾಡಸಿದ್ದ, ಲಕ್ಷ್ಮಣ ಪಾಟೀಲ, ಅಡಿವೆಪ್ಪ ಸಾಲಗಲ್‌, ರವಿಕಿರಣ ಉತ್ನಾಳ, ಸದಾಶಿವ ಬುಟಾಳೆ, ಕಾಂತು ಇಂಚಗೇರಿ, ಬಾಬು ಹಂಚನಾಳ, ಬೀರಪ್ಪ ಸೊಡ್ಡಿ, ಬಸು ಹುಗ್ಗಿ ಇದ್ದರು.

ಕರವೇ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರು ಸ್ಥಾಪನೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ, ರಾಯಣ್ಣ ಜನ್ಮಭೂಮಿಯಲ್ಲೇ ಪ್ರತಿಮೆಗೆ ಅಪಮಾನ ಮಾಡುವ ಕೃತ್ಯ ನಡೆದಿರುವುದು ಖಂಡನೀಯ. ಪ್ರತಿಮೆಯನ್ನು ಸರ್ಕಾರ ಕೂಡಲೇ ಮರು ಸ್ಥಾಪಿಸದಿದ್ದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಸಂಘಟನೆ ಪ್ರಮುಖರಾದ ಮಹಾದೇವ ರಾವಜಿ, ಸಾಯಬಣ್ಣ ಮಡಿವಳಾರ, ದಸ್ತಗೀರ್‌ ಸಾಲೋಟಗಿ, ಫಯಾಜ್‌ ಕಲಾದಗಿ, ವಿನೋದ ದಳವಾಯಿ, ಭರತ ಕೋಳಿ, ರಜಾಕ್‌ ಕಾಖಂಡಕಿ, ಬಸವರಾಜ ಕಾತ್ರಾಳ, ಶಹಾಜಾನ್‌ ಖಾದ್ರಿ, ಎಸ್‌.ವೈ. ನಡುವಿನಕೇರಿ, ತಾಜೋದ್ದೀನ್‌ ಕಲಿಪಾ, ಅಕ್ರಂ ಮಾಶ್ಯಾಳಕರ, ರಾಜು
ಕಂಬಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

ಜಯ ಕರ್ನಾಟಕ ರಕ್ಷಣಾ ಸೇನೆ: ಘಟನೆ ಖಂಡಿಸಿ ಸಂಘಟನೆಯಿಂದ ಪ್ರತಿಭಟಿಸಲಾಯಿತು. ಕೃಷ್ಣಾ ಬೋಸ್ಲೆ, ಶಿವು ಚಿಕ್ಕೋಡಿ, ಸುರೇಶ ಕಾಗಲಕರ, ಬಸವರಾಜ ಗಳಿವೆ, ರಾಜು ಕೋಟ್ಯಾಳ, ಉಮೇಶ ರುದ್ರಮುನಿ, ಯುವರಾಜ ಸೋನಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next