Advertisement

ಇಂಗ್ಲೆಂಡ್‌ ಮಾಜಿ ನಾಯಕ ಇಲ್ಲಿಂಗ್‌ವರ್ತ್‌ ನಿಧನ

09:45 PM Dec 26, 2021 | Team Udayavani |

ಲಂಡನ್‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ರೇ ಇಲ್ಲಿಂಗ್‌ವರ್ತ್‌ (89) ಕ್ರಿಸ್ಮಸ್‌ ದಿನದಂದು ನಿಧನ ಹೊಂದಿದರು. ಆಫ್ಸ್ಪಿನ್ನಿಂಗ್‌ ಆಲ್‌ರೌಂಡರ್‌ ಆಗಿದ್ದ ಇಲ್ಲಿಂಗ್‌ವರ್ತ್‌ 1951-1983ರ ಅವಧಿಯಲ್ಲಿ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು.

Advertisement

51ನೇ ವರ್ಷದಲ್ಲಿ ಕ್ರಿಕೆಟ್‌ನಿಂದ ದೂರ ಸರಿಯುವಾಗ ಅವರು ದೇಶೀಯ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸೇರಿ 24,134 ರನ್‌ ಹಾಗೂ 2,072 ವಿಕೆಟ್‌ಗಳ ಒಡೆಯರಾಗಿದ್ದರು.  ಇಂಗ್ಲೆಂಡ್‌ ಪರ 61 ಟೆಸ್ಟ್‌ ಆಡಿದ್ದ ರೇ ಇಲ್ಲಿಂಗ್‌ವರ್ತ್‌ 1,836 ರನ್‌ ಹಾಗೂ 122 ವಿಕೆಟ್‌ ಸಂಪಾದಿಸಿದ್ದರು.

1970-71ರ ಆ್ಯಷಸ್‌ ಸರಣಿ ಗೆಲುವಿನ ನಾಯಕನೂ ಆಗಿದ್ದರು. ಈ ಗೆಲುವು ಆಸ್ಟ್ರೇಲಿಯ ನೆಲದಲ್ಲಿ ಒಲಿದಿತ್ತೆಂಬುದು ಉಲ್ಲೇಖನೀಯ. ರೇ ಇಲ್ಲಿಂಗ್‌ವರ್ತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರ ಪತ್ನಿ ಈ ವರ್ಷದ ಆರಂಭದಲ್ಲಿ ಕ್ಯಾನ್ಸರ್‌ನಿಂದಲೇ ನಿಧನ ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next