Advertisement

ರಾವತ್‌ಗೆ ಮಠಾಧಿಧೀಶರಿಂದ ಸಂತಾಪ

12:09 PM Dec 11, 2021 | Team Udayavani |

ಭಾಲ್ಕಿ: ಸೇನಾ ಕಾಪ್ಟರ್‌ ದುರಂತದಲ್ಲಿ ಹುತಾತ್ಮರಾದ ಜನರಲ್‌ ಬಿಪಿನ್‌ ರಾವತ್‌ಗೆ ಪಟ್ಟಣದಲ್ಲಿ ನುಡಿನಮನ ಸಲ್ಲಿಸಲಾಯಿತು.

Advertisement

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಸಿದ್ದೇಶ್ವರ ಸ್ವಾಮೀಜಿ ನಡೆಸಿ ಕೊಡುತ್ತಿರುವ ಪ್ರವಚನದ ವೇದಿಕೆಯಲ್ಲಿ, ಜನರಲ್‌ ಬಿಪಿನ್‌ ರಾವತ್‌ ಅವರ ಭಾವಚಿತ್ರಕ್ಕೆ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಸೇರಿದಂತೆ ನಾಡಿನ ವಿವಿಧ ಮಠಗಳ ಮಠಾಧಿಧೀಶರು ಪುಷ್ಟನಮನ ಅರ್ಪಿಸಿದರು.

ನಂತರ ಮಾತನಾಡಿದ ಡಾ| ಬಸವಲಿಂಗ ಪಟ್ಟದ್ದೇವರು, ಸಶಸ್ತ್ಯ ಪಡೆಯ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ರಾಷ್ಟ್ರದ ದೊಡ್ಡ ಸಂಪತ್ತಾಗಿದ್ದರು. ಅವರು ಸೇನೆಯ ಮೂರು ಪಡೆಯ ಮುಖ್ಯಸ್ಥರಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಸುಮಾರು 4 ದಶಕಗಳಿಂದ ಸೇನೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದ ಬಿಪಿನ್‌ ರಾವತ್‌ ಮತ್ತು ಅವರ ಧರ್ಮಪತ್ನಿ ಡಾ| ಮಧುಲಿಕಾ ಸೇರಿ ಸೇನೆಯ ಹನ್ನೊಂದು ನಾಯಕರು ಕಾಪ್ಟರ್‌ ದುರಂತದಲ್ಲಿ ಹುತಾತ್ಮರಾಗಿರುವುದು ಇಡೀ ದೇಶವೇ ಶೋಕದಲ್ಲಿ ಮೊಳಗಿದೆ. ದುರಂತದಲ್ಲಿ ಮಡಿದ ಕುಟುಂಬ ಸದಸ್ಯರಿಗೆ ದುಃಖ ತಡೆದು ಕೊಳ್ಳುವ ಶಕ್ತಿ ವಿಶ್ವಗುರು ಬಸವಣ್ಣನವರು ಕಲ್ಪಿಸಲಿ ಎಂದು ಪ್ರಾರ್ಥಿಸಿದರು.

ನಿವೃತ್ತ ಸೈನಿಕ ಶಿವಯ್ಯ ಮಠಪತಿ, ಶಿಕ್ಷಕ ಶಿವಾನಂದ ದಾಡಗೆ ಅವರು ದೇಶಕ್ಕೆ ಬಿಪಿನ್‌ ರಾವತ್‌ ಅವರು ನೀಡಿರುವ ಕೊಡುಗೆ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next