ಚಿರೋಟಿ ರವೆ- 2ಕಪ್, ತುಪ್ಪ- 1 ಕಪ್, ಸಕ್ಕರೆ- 4 ಕಪ್, ಏಲಕ್ಕಿ ಪುಡಿ, ಕೇಸರಿ ದಳ 10
Advertisement
ತಯಾರಿಸುವ ವಿಧಾನ:ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಚಿರೋಟಿ ರವೆ ಹುರಿಯಿರಿ. ನಂತರ ಒಂದು ಬಾಣಲೆಗೆ ಹಾಲು, ಸಕ್ಕರೆ, ಮತ್ತು ತುಪ್ಪ ಹಾಕಿ ಪಾಕದಂತೆ ಮಾಡಿಕೊಳ್ಳಿ. ಈ ಮಿಶ್ರಣ ಹದಕ್ಕೆ ಬಂದಾಗ ಹುರಿದ ಚಿರೋಟಿ ರವೆ ಹಾಕಿ ಕೈಯಾಡಿಸುತ್ತಿರಿ. ಈ ಮಿಶ್ರಣ ತಳ ಬಿಡುವ ಹದಕ್ಕೆ ಬಂದಾಗ ಏಲಕ್ಕಿ ಪುಡಿ ಹಾಕಿ, ತಟ್ಟೆಯ ಮೇಲೆ ತುಪ್ಪ ಹಚ್ಚಿ ಹರಡಿ. ಸ್ವಲ್ಪ ಸಮಯದ ನಂತರ ಡೈಮಂಡ್ ಆಕಾರದಲ್ಲಿ ಕತ್ತರಿಸಿಕೊಂಡು ತಣ್ಣಗಾದ ನಂತರ ಸೇವಿಸಿ.