ಬೀದರ: ಶನಿವಾರ ಬೆಳಗ್ಗೆ ನಗರದ ಗಾಂಧಿ ಗಂಜ್ ಹಾಗೂ ಚಿದ್ರಿ ಸಮೀಪದ ಗೋದಾಮಿನ ಮೇಲೆ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರ ಮಾರ್ಗದರ್ಶನದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ತಡರಾತ್ರಿ ಮುಕ್ತಾಯಗೊಂಡಿದ್ದು, ಸುಮಾರು 600ಕ್ಕೂ ಅಧಿಕ ಕ್ವಿಂಟಲ್ ಅಕ್ಕಿ, ತೊಗರಿ ಬೇಳೆ, ಹಾಲಿನ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ಗಾಂಧಿಗಂಜ್‌ನ ಎಪಿಎಂಸಿ ಗೋದಾಮು ದಾಳಿಯಲ್ಲಿ 41.80 ಟನ್ ಅಕ್ಕಿ, 50.70 ಕ್ವಿಂಟಲ್ ತೊಗರಿ ಬೇಳೆ, 50 ಕೆಜಿ ಹಾಲಿನ ಪುಡಿ, 1.50 ಕ್ವಿಂಟಲ್ ಅಮೂಲ್ ಪ್ರೋಟಿನ್ ಪುಡಿ, 1.25 ಕ್ವಿಂಟಲ್ ಗೋಧಿ ವಶಪಡಿಸಿಕೊಳ್ಳಲಾಗಿದೆ.
ಸಾಗಣೆಗೆ ಬಳಸುತ್ತಿದ್ದ ಲಾರಿ ಕೂಡ ಜಪ್ತಿ ಮಾಡಲಾಗಿದೆ. ಚಿದ್ರಿ ಸಮೀಪದ ಇಂಡಿಯನ್ ಕೂಲರ್ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 22.55 ಟನ್ ಅಕ್ಕಿ, 15.25 ತೊಗರಿ ಬೇಳೆ, 52 ಕ್ವಿಂಟಲ್ ಗೋ ಧಿ, 22 ಕೆಜಿ ಹೆಸರು ಕಾಳು, 2.50 ಕ್ವಿಂಟಲ್ ಹಾಲಿನ ಪುಡಿ, 1 ಕ್ವಿಂಟಲ್ ಗೋಧಿ ರವಾ, 90 ಕೆಜಿ ಸಾಂಬಾರ ಮಸಾಲಾ, 13 ಬ್ಯಾಗ್ ಹಾಲಿನ ಪುಡಿ (1 ಕೆಜಿ ತೂಕದ 25 ಬ್ಯಾಗ್) ವಶಪಡಿಸಿಕೊಳ್ಳಲಾಗಿದೆ.
ಟೆಂಪೋ ಕೂಡ ಜಪ್ತಿ ಮಾಡಲಾಗಿದೆ. ಗಾಂಧಿ ಗಂಜ್‌ನ ಗೋದಾಮು ದಾಳಿಗೆ ಸಂಬಂಧಿಸಿದಂತೆ ನಿಶಾಂತ್ ಪವಾರ, ಕರಣ ಪಾಟೀಲ, ವೆಂಕಟ್,ಚಂದ್ರಪ್ಪಾ ಹಾಗೂ ಆರೋಣ ಅವರ ವಿರುದಟಛಿ ಪ್ರಕರಣ ದಾಖಲಿಸಲಾಗಿದೆ. ಲಾರಿ ಚಾಲಕನನ್ನು ಈಗಾಗಲೇ ಬಂಧಿಸಲಾಗಿದೆ. ಚಿದ್ರಿಯ ಇಂಡಿಯನ್ ಕೂಲರ್ ಮೇಲೆ ನಡೆಸಿದ ದಾಳಿಗೆ ಸಂಬಂ ಧಿಸಿದಂತೆ ಸೂರ್ಯಕಾಂತ್,ಮಚೇಂದ್ರ, ಕರಣ ಪಾಟೀಲ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.