ಶ್ರೀರಂಗಪಟ್ಟಣ : ಕಾವಿ ತೊಟ್ಟವರೆಲ್ಲ ಸ್ವಾಮೀಜಿಗಳಲ್ಲ ಸಮಾಜದಲ್ಲಿ ಶಾಂತಿ ನೆಲಸುವರು ಸ್ವಾಮೀಜಿಗಳು ಆದರೆ ಅಶಾಂತಿ ಮೂಡಿಸಿ ಸಮಾಜದ ಸ್ವಾಸ್ಥವನ್ನು ಹಾಳು ಮಾಡುವರು ಸ್ವಾಮೀಜಿಗಳಾಗಲು ಸಾಧ್ಯವಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ತಾಲೂಕಿನ ಮಂಡ್ಯದಕೊಪ್ಪಲು -ಶ್ರೀರಂಗಪಟ್ಟಣ ಸಂಪರ್ಕ ಕಲ್ಪಿಸುವ ಗ್ರಾಮದಲ್ಲಿ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಅಭಿವೃದ್ದಿಗೆ ಗುದ್ದಲಿ ಪೂಜೆ ಸಲ್ಲಿಸಿ ಪಟ್ಟಣದ ಜಾಮೀಯಾ ಮಸೀದಿ ಕೆಡುವುದರ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿದ್ದ ಕಾಳಿ ಸ್ವಾಮೀಜಿ ವಿರುದ್ದ ಹರಿಹಾಯ್ದ ಅವರು ಸಮಾಜದಲ್ಲಿ ಶಾಂತಿ ಕದಡುವವರು ಹೇಗೆ ಸ್ವಾಮೀಜಿಗಳಾಗುತ್ತಾರೆ?. ಒಂದು ವೇಳೆ ಈ ಬಗ್ಗೆ ವಿಚಾರವಿದ್ದರೆ ಕಾನೂನಿನ ಮೂಲಕ ಹೋರಾಟ ನಡೆಸಬೇಕು. ಅದು ಬಿಟ್ಟು ರಸ್ತೆಯಲ್ಲಿ ನಿಂತುಕೊಂಡು ಮನಸ್ಸೋ ಇಚ್ಚೆ ಮಾತನಾಡುವುದು ಗೌರವ ತರುವ ವಿಷಯವಲ್ಲ. ಯಾರೇ ಆದರೂ ಕಾನೂನು ಎಲ್ಲರಿಗೂ ಒಂದೆ ಎಂದು ಹೇಳಿದರು.
ಕೇಂದ್ರ ಪುರಾತತ್ವ ಇಲಾಖೆ ಪಟ್ಟಣದ ಸೇರಿದಂತೆ ಗಂಜಾಂನಲ್ಲಿ ಸ್ಮಾರಕಗಳ ಹೆಸರಿನಲ್ಲಿ ಸರ್ವೆ ಮಾಡುತ್ತಿದ್ದಾರೆ ಇದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದು ಕೇವಲ ಶ್ರೀರಂಗಪಟ್ಟಣ ಹಾಗೂ ರಾಜ್ಯದ ಸಮಸ್ಯೆಯಲ್ಲಿ ಇಡೀ ದೇಶದ ಸಮಸ್ಯೆಯಾಗಿದ್ದು, ಈ ಸಂಬಂದ ಈ ಹಿಂದೆ ಸದನದಲ್ಲಿ ಧ್ವನಿ ಎತ್ತಿದ್ದೇನೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗಲೂ ನಾನು ಬಿಡುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಮದ್ಯಪ್ರವೇಶಿಸಿ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿದರು.
ನಾಲೆಗಳಿಗೆ ನೀರು: ಈ ಬಾರಿ ರೈತರು ಆತಂಕ ಪಡುವ ಅಗತ್ಯಲ್ಲ, ಹಿಂದಿನಂತೆ ಜನ-ಜಾನುವಾರು ಹಾಗೂ ಬೆಳಿದು ನಿಂತಿರುವ ಬೆಳೆಗಳಿಗೆ ನಾಲೆಗಳ ಮೂಲಕ ನೀರು ಹರಿಸಲಾಗುವುದು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಕೆಆರ್‌ಎಸ್ ಜಲಾಶಯದಿಂದ ನಾಲೆಗಳ ಮೂಲಕ ನೀರು ಹರಿಸಿಲ್ಲ, ಈ ಸಂಬಂಧ ಜನಪ್ರತಿನಿಧಿಗಳು ಮೌನವಸಿದ್ದಾರೆ ಎಂದು ಕಾನೂನಿನ ಅರಿವೇ ಇಲ್ಲದ ಕೆಲವರು ಸುದ್ದಿಗ್ಠೋಯಲ್ಲಿ ಮಾತನಾಡಿದ್ದಾರೆ, ಕಾನೂನಾತ್ಮಕವಾದ ವಿಚಾರ ಆಗಿರುವುದರಿಂದ ಜನಪ್ರತಿನಿಧಿಗಳಾಗಲೀ ಅಥವಾ ಅಧಿಕಾರಿಗಳೇ ಆಗಲಿ ಕೆಆರ್‌ಎಸ್ ಅಣೆಕಟ್ಟೆ ಸಂಬಂಧವಾಗಿ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ. ಯಥಾಪ್ರಕಾರ ಈ ಹಿಂದೆ ಜನ-ಜಾನುವಾರು ಸೇರಿದಂತೆ ಕಬ್ಬು ಬೆಳೆಗಳಿಗೆ ಹೇಗೆ ನೀರು ಹರಿಸಲಾಗುತ್ತಿತ್ತು ಅದೇ ರೀತಿ ಈ ‘ಬಾರಿಯು ಸಹ ನಾಲೆಗಳ ಮೂಲಕ ನೀರು ಹರಿಸಲಾಗುವುದು. ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹದ್ದು, ರೈತರು ಆತಂಕ ಪಡುವ ಅಗತ್ಯಲ್ಲ ಎಂದರು.
ಕೋವಿಡ್ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿರುವುದರಿಂದ ಕೆಲವೆಡೆ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಸವಿತ, ಸದಸ್ಯರಾದ ನೇತ್ರಾವತಿ, ನವೀನ್, ಚಂದ್ರ, ರಮೇಶ, ನಾಗೇಶ, ನಾಗೇಂದ್ರ ಮುಖಂಡರಾದ ರಾಘವೇಂದ್ರ, ಮರಿಯಪ್ಪ ಇತರರು ಇದ್ದರು,