Advertisement

ಅಣಕಿಸಿದ ವ್ಯಕ್ತಿಗೆ ಇಡಿಯಟ್‌ ಅಂದರ ಜಡೇಜ

01:05 AM Jan 12, 2019 | |

ಸಿಡ್ನಿ: ಪದೇ ಪದೇ ಹೊಸ ಕೇಶ ವಿನ್ಯಾಸ ಮಾಡಿಸಿಕೊಳ್ಳುವ ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜ, ಇದೇ ವಿಚಾರದಲ್ಲಿ ಅಭಿಮಾನಿಯೊಬ್ಬರೊಂದಿಗೆ ವಾಗ್ವಾದ ನಡೆಸಿ ಸುದ್ದಿಯಾಗಿದ್ದಾರೆ! 

Advertisement

ಹೊಸ ಕೇಶ ವಿನ್ಯಾಸ ಹೇಗೆ ಮಾಡಿಸಿಕೊಳ್ಳಬಹುದು, ಸಲಹೆ ನೀಡಿ ಎಂದು ಜಡೇಜ ಇನ್ಸಾ$rಗ್ರಾಮ್‌ನಲ್ಲಿ ಕೇಳಿದ್ದರು. ಅದಕ್ಕೆ ವಿಪಿನ್‌ ತಿವಾರಿ ಹೆಸರಿನ ವ್ಯಕ್ತಿಯೊಬ್ಬರು, ಈ ರೀತಿ ಸಾಮಾಜಿಕ ತಾಣದಲ್ಲಿ ಕಾಲ ಕಳೆಯುವುದರ ಬದಲು ಕ್ರಿಕೆಟ್‌ ಕಡೆ ಗಮನ ಕೊಡಿ, ಬ್ಯಾಟಿಂಗ್‌ ಕೌಶಲ್ಯ ವೃದ್ಧಿಸಿಕೊಳ್ಳಿ ಎಂದು ಅಣಕಿಸಿದರು. ಇದರಿಂದ ಸಿಟ್ಟಾದ ಜಡೇಜ, ನಿಮ್ಮನೆಯಲ್ಲಿ ಟೀವಿ ಇಲ್ಲವೇ? ಕಡೆಯ ಟೆಸ್ಟ್‌ ಪಂದ್ಯವನ್ನು ನೋಡಿಲ್ಲವೇ? ಇಡಿಯಟ್‌ ಎಂದು ಬೈದಿದ್ದರು.

ವಾಸ್ತವವಾಗಿ ಭುಜದ ನೋವಿನಿಂದ ಚೇತರಿಸಿಕೊಂಡು ಆಸ್ಟ್ರೇಲಿಯಕ್ಕೆ ತೆರಳಿದ ಜಡೇಜ ಕಡೆಯೆರಡು ಟೆಸ್ಟ್‌ಗಳಲ್ಲಿ ಉತ್ತಮವಾಗಿಯೇ ಆಡಿದ್ದರು. ಸಿಡ್ನಿ ಟೆಸ್ಟ್‌ನಲ್ಲಿ 7 ವಿಕೆಟ್‌ ಪಡೆದುಕೊಳ್ಳುವುದರೊಂದಿಗೆ, ವೇಗವಾಗಿ ಆಡಿ 81 ರನ್‌ ಗಳಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಳ್ಳದೇ ಅಭಿಮಾನಿ ವ್ಯಂಗ್ಯವಾಡಿ ಬೈಸಿಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ತಾರೆಯರನ್ನು ಬೈಯುವ ಪ್ರವೃತ್ತಿ ಹೆಚ್ಚಾಗಿರುವುದೂ ಈ ಪ್ರಕರಣಕ್ಕೆ ಕಾರಣಗಳಲ್ಲೊಂದು.

ಸದ್ಯದ ಪರಿಸ್ಥಿತಿಯಲ್ಲಿ ಅಭಿಮಾನಿ ಪ್ರತಿಕ್ರಿಯೆ ಅತಿರೇಕವಾಗಿ ಕಂಡಿದ್ದರೂ, ಅದರಲ್ಲೂ ಸತ್ಯವಿದೆ ಎಂದು ಇನ್ನು ಕೆಲವರು ವಾದಿಸಿದ್ದಾರೆ. ಭಾರತ ತಂಡಕ್ಕೆ ಬ್ಯಾಟಿಂಗ್‌ ಆಲ್‌ರೌಂಡರ್‌ ಆಗಿ ಜಡೇಜ ಪ್ರವೇಶಿಸಿದರು. ಐಪಿಎಲ್‌ನಲ್ಲಿ ಅವರು ಸ್ಫೋಟಕ ಆಟವಾಡಿ ಗಮನ ಸೆಳೆದಿದ್ದರು. ಕಾಲಾನಂತರದಲ್ಲಿ ಬೌಲರ್‌ ಆಗಿ ಬದಲಾಗಿದ್ದಾರೆ. ಬಹುತೇಕ ಸಂದರ್ಭದಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ನಡೆಸದೇ ಟೀಕೆಗೊಳಗಾಗಿದ್ದಾರೆ. ಅದರ ಪರಿಣಾಮ ಟೆಸ್ಟ್‌ ತಂಡದಲ್ಲಿ ಅವರು ಖಾಯಂ ಸ್ಥಾನ ಪಡೆದಿದ್ದಾರೆ. ಸೀಮಿತ ಓವರ್‌ ತಂಡದಲ್ಲಿ ಅವರ ಸ್ಥಾನ ಭದ್ರವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next