Advertisement

ರವಿಚಂದ್ರನ್‌ ಶ್ರೀಕೃಷ್ಣನಾಗಿ ಹೀಗೆ ಕಾಣ್ತಾರೆ …

11:25 AM Jan 01, 2018 | |

ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರ ಇನ್ನೇನು ಮುಗಿಯೋ ಹಂತ ತಲುಪಿದೆ. ಜನವರಿ 5 ರಂದು ಚಿತ್ರಕ್ಕೆ ಕುಂಬಳಕಾಯಿ. ಈ ಚಿತ್ರದಲ್ಲಿ ಸಾಕಷ್ಟು ಸ್ಟಾರ್‌ ನಟರು ನಟಿಸಿದ್ದಾರೆ. ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಜೂನಿಯರ್‌ ಕಲಾವಿದರಿಗಂತು ಲೆಕ್ಕವೇ ಇಲ್ಲ.

Advertisement

“ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌ ದುರ್ಯೋಧನರಾಗಿ ಹೇಗೆ ಕಾಣುತ್ತಾರೆಂಬುದು ಎಲ್ಲರಿಗೂ ಗೊತ್ತು. ಅಂತೆಯೇ, ಭೀಷ್ಮರಾಗಿ ಅಂಬರೀಷ್‌, ಕರ್ಣರಾಗಿ ಅರ್ಜುನ್‌ ಸರ್ಜಾ, ಅಭಿಮನ್ಯುವಾಗಿ ನಿಖೀಲ್‌ಕುಮಾರ್‌ ಅವರು ಹೇಗೆಲ್ಲಾ ಕಾಣುತ್ತಾರೆ ಅನ್ನುವುದನ್ನೂ ಚಿತ್ರತಂಡ ಫೋಟೋ ಬಿಡುಗಡೆ ಮಾಡಿದೆ.

ಆದರೆ, ಆ ಚಿತ್ರದಲ್ಲಿ ರವಿಚಂದ್ರನ್‌ ಅವರು ಶ್ರೀಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದಷ್ಟೇ ಹೇಳಲಾಗಿತ್ತು. ಆದರೆ, ರವಿಚಂದ್ರನ್‌ ಅವರು ಶ್ರೀಕೃಷ್ಣನ ಪಾತ್ರದಲ್ಲಿ ಹೇಗೆ ಕಾಣುತ್ತಾರೆ ಅನ್ನುವ ಕುತೂಹಲ ಮಾತ್ರ ಎಲ್ಲರಲ್ಲೂ ಇತ್ತು. ರವಿಚಂದ್ರನ್‌ ಅವರ ಶ್ರೀಕೃಷ್ಣನ ಗೆಟಪ್‌ ಅನ್ನು ಚಿತ್ರಮಂದಿರದಲ್ಲೇ ನೋಡಬೇಕೆಂಬ ಆಸೆ ಚಿತ್ರತಂಡಕ್ಕಿತ್ತು.

ಆದರೆ, ಇದೀಗ ರವಿಚಂದ್ರನ್‌ ಅವರ ಶ್ರೀಕೃಷ್ಣನ ಗೆಟಪ್‌ನ ಫೋಟೋ ಬಿಡುಗಡೆಯಾಗಿದೆ. ಇಲ್ಲಿ ಶ್ರೀ ಕೃಷ್ಣನ ಅವತಾರದಲ್ಲಿರುವುದು ರವಿಚಂದ್ರನ್‌ ಅವರೇನಾ ಎಂಬ ಪ್ರಶ್ನೆ ಮೂಡುವುದಂತೂ ನಿಜ. ಆದರೆ, ಇದು ರವಿಚಂದ್ರನ್‌ ಅವರದ್ದೇ ಫೋಟೋ. ಅದೇನೆ ಇದ್ದರೂ, ಇದೇ ಮೊದಲ ಸಲ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿಚಂದ್ರನ್‌, ಚಿತ್ರದಲ್ಲಿ ಸುಮಾರು 30 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next