Advertisement

V. Ravichandran; ಪ್ರೇಮಲೋಕ-2 ಮಾಡಲು ಮುಂದಾದ ಕ್ರೇಜಿಸ್ಟಾರ್‌

12:47 PM Nov 06, 2023 | |

ನಟ ರವಿಚಂದ್ರನ್‌ ಕೆಲವು ದಿನಗಳ ಹಿಂದಷ್ಟೇ “ಮುಂದಿನ ವರ್ಷ ನನ್ನ ರುದ್ರ ತಾಂಡವ ಶುರು…’ ಎನ್ನುವ ಮೂಲಕ ಹೊಸದೇನನ್ನೋ ಮಾಡುವ ಸುಳಿವು ಕೊಟ್ಟಿದ್ದರು. ಆದರೆ, ಏನೆಂದು ಹೇಳಿರಲಿಲ್ಲ. ಆದರೆ, ಈಗ ಅವರ ಕನಸಿನ ಪ್ರಾಜೆಕ್ಟ್ಗೆ ಸಿದ್ಧರಾಗಿದ್ದಾರೆ. ಅದು “ಪ್ರೇಮಲೋಕ-2′.

Advertisement

ಹೌದು, ಕ್ರೇಜಿಸ್ಟಾರ್‌ ರವಿಚಂದ್ರನ್‌ “ಪ್ರೇಮಲೋಕ-2′ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸತತ ಒಂದು ವರ್ಷದಿಂದ ಆ ಚಿತ್ರದ ಸ್ಕ್ರಿಪ್ಟ್ನಲ್ಲಿ ಬಿಝಿಯಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ನಿರೀಕ್ಷೆಯ ಚಿತ್ರ ಮಾಡುವತ್ತ ರವಿಚಂದ್ರನ್‌ ಗಮನ ನೆಟ್ಟಿರೋದು ಸುಳ್ಳಲ್ಲ.

ನಿಮಗೆ ಗೊತ್ತಿರುವಂತೆ 1987ರಲ್ಲಿ ತೆರೆಕಂv “ಪ್ರೇಮಲೋಕ’ ಚಿತ್ರ ದೊಡ್ಡ ದಾಖಲೆ ಮಾಡಿತ್ತು. ರವಿಚಂದ್ರನ್‌ ನಿರ್ದೇಶಿಸಿ, ನಟಿಸಿದ ಈ ಸಿನಿಮಾದ ಹಾಡು ಗಳು ಎವರ್‌ಗ್ರೀನ್‌ ಸಾಂಗ್ಸ್‌ ಪಟ್ಟಿಗೆ ಸೇರಿವೆ. ಈಗ ರವಿಚಂದ್ರನ್‌ “ಪ್ರೇಮಲೋಕ-2′ ಮಾಡಲು ಮುಂದಾಗಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುವ ಜೊತೆಗೆ ನಟಿಸಲಿದ್ದಾರೆ. ಜೊತೆಗೆ ಅವರ ಇಬ್ಬರು ಪುತ್ರರು ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸಿನಿಮಾ ಯಾವಾಗ ಶುರುವಾಗುತ್ತದೆ ಸೇರಿದಂತೆ ಇತರ ಪ್ರಶ್ನೆಗಳಿಗೆ ಶೀಘ್ರದಲ್ಲಿ ಉತ್ತರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next