Advertisement

ರವಿಚಂದ್ರನ್ ಹೊಸ ಚಿತ್ರ ‘ಗೌರಿ’

05:50 PM Dec 10, 2022 | Team Udayavani |

ನಟ ರವಿಚಂದ್ರನ್‌ ಅವರು ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಇತ್ತೀಚೆಗೆ ಮುಹೂರ್ತ ನಡೆದಿದೆ. ಅದು “ಗೌರಿ’. ಇದು ರವಿಚಂದ್ರನ್‌ ಅವರ ಹೊಸ ಸಿನಿಮಾ. ಈ ಚಿತ್ರಕ್ಕೆ ಶಂಕರ್‌ ಬಿ/ಎಚ್‌ ಎಂಬ ಟ್ಯಾಗ್‌ಲೈನ್‌ ಇದೆ. ಈ ಚಿತ್ರವನ್ನು ಅನೀಸ್‌ ನಿರ್ದೇಶನ ಮಾಡುತ್ತಿದ್ದು, ಎನ್‌.ಎಸ್‌.ರಾಜ್‌ಕುಮಾರ್‌ ಹಾಗೂ ವಿ.ಎಸ್‌.ರಾಜ್‌ಕುಮಾರ್‌ ಸೇರಿ ನಿರ್ಮಿಸುತ್ತಿದ್ದಾರೆ.

Advertisement

ಇಡೀ ಸಿನಿಮಾವನ್ನು ಮೂರು ಪಾತ್ರಗಳನ್ನಿಟ್ಟುಕೊಂಡು ಮಾಡುತ್ತಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ದಾಂಡೇಲಿ ಕಾಡಿನಲ್ಲಿ ನಡೆಯಲಿದೆಯಂತೆ. ಚಿತ್ರೀಕರಣಕ್ಕೆ ಹುಲಿಯನ್ನು ಬಳಸಿಕೊಳ್ಳುವ ಯೋಚನೆ ಕೂಡಾ ಚಿತ್ರತಂಡಕ್ಕಿದೆ.

ಚಿತ್ರದ ಬಗ್ಗೆ ಮಾತನಾಡುವ ರವಿಚಂದ್ರನ್‌, “ಇದು ಬೇರೆ ತರಹದ ಸಿನಿಮಾ. ಈ ಸಿನಿಮಾವನ್ನು ವಿವರಿಸೋದು ಕಷ್ಟ. ಕಥೆ ನನಗೆ ತುಂಬಾ ಹೊಸದಾಗಿದೆ. ನಿರ್ದೇಶಕರ ಕಲ್ಪನೆಗೆ ಜೀವ ತುಂಬೋದಷ್ಟೇ ನನ್ನ ಕೆಲಸ. ಇಡೀ ಸಿನಿಮಾ ಮೂರು ಪಾತ್ರ ಹಾಗೂ ಒಂದು ಪ್ರಾಣಿಯ ಸುತ್ತ ನಡೆಯಲಿದೆ. ದಾಂಡೇಲಿ ಕಾಡಿನಲ್ಲೇ ನಡೆಯಲಿದೆ. ಸಾಕಷ್ಟು ಹೊಸ ಟೆಕ್ನಾಲಜಿಯನ್ನು ಕೂಡಾ ಈ ಸಿನಿಮಾದಲ್ಲಿ ನಿರ್ದೇಶಕರು ಬಳಸಿಕೊಳ್ಳಲಿದ್ದಾರೆ’ ಎಂದರು.

ಚಿತ್ರದಲ್ಲಿ ಬರ್ಕಾ ಸಿಂಗ್‌ ನಾಯಕಿ. ನಿರ್ದೇಶಕ ಅನೀಸ್‌ ಕೂಡಾ, ಇದು ಹೊಸ ಬಗೆಯ ಸಿನಿಮಾವಾಗುವ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next