Advertisement

ರೌಡಿ ಫೆಲೋನಲ್ಲಿ ರವಿವರ್ಮಾ ಡಿಫ‌ರೆಂಟ್‌ ವಿಲನ್‌

08:34 AM Jul 17, 2020 | mahesh |

ಕನ್ನಡ ಸೇರಿದಂತೆ ಪರಭಾಷೆಗಳಲ್ಲೂ ಬೇಡಿಕೆಯ ಸಾಹಸ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರವಿವರ್ಮಾ, ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ, ಈ ಬಾರಿ ರವಿವರ್ಮಾ ಸಿ ನಿಮಾವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅದು ವಿಲನ್‌ ಆಗಿ. ರೌಡಿ ಫೆಲೋ ಚಿತ್ರದಲ್ಲಿ ರವಿವರ್ಮಾ ಮಾತು ಬಾರದ, ಕಿವಿ ಕೇಳಿಸದ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಕೂಡಾ ಮುಗಿದಿದೆ. ಇನ್ನು, ರವಿವರ್ಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

Advertisement

ಈಗಾಗಲೇ ಶಿವರಾಜ್‌ ಕುಮಾರ್ ನಾಯಕರಾಗಿರುವ ರುಸ್ತುಂ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇನ್ನು, ಈ ಚಿತ್ರದಲ್ಲಿ ಆರ್‌ಜೆ ರೋಹಿತ್‌ ನಾಯಕರಾಗಿ ನಟಿಸುವ ಜೊತೆಗೆ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ಅವರು ನಿರ್ದೇಶಿಸಲು ಹೊರಟಿರುವ “ರೌಡಿ ಫೆಲೋ’ ಚಿತ್ರದ ಹಿಂದೆ “ಕೆಜಿಎಫ್’ ಖ್ಯಾತಿಯ ಪ್ರಶಾಂತ್‌
ನೀಲ್‌ ಇದ್ದಾರೆ. ಇಡೀ ಸಿನಿಮಾದ ಸ್ಕ್ರಿಪ್ಟ್ ಕೆಲಸ ಪ್ರಶಾಂತ್‌ ನೀಲ್‌ ಅವರ ಸಮ್ಮುಖದಲ್ಲೇ ಆಗಿದೆ.

ಅವರ ಮಾರ್ಗದರ್ಶನದಲ್ಲೇ, ಸ್ಕ್ರಿಪ್ಟ್ ರೆಡಿಯಾಗಿದ್ದು, ಇದೀಗ “ರೌಡಿ ಫೆಲೋ’ ಮೂಲಕ ನಿರ್ದೇಶನದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ರೋಹಿತ್‌. ಈ ಹಿಂದೆ “ಕರ್ವ’ ಸಿನಿಮಾ ಮೂಲಕ ಸುದ್ದಿ ಯಾಗಿದ್ದ ರೋಹಿತ್‌ ಆ ಬಳಿಕ ಅವರು “ಬಕಾಸುರ’ ಚಿತ್ರದಲ್ಲಿ ನಟಿಸಿದ್ದರು. ರವಿ ಚಂದ್ರನ್‌ ಜೊತೆ ಮಾಡಿದ 2ನೇ ಸಿನಿಮಾ ಅದಾ ಗಿತ್ತು. ಈಗ ಹೊಸ ಬಗೆಯ ಸ್ಕ್ರಿಪ್ಟ್ ಮೂಲಕ ಅಖಾಡಕ್ಕೆ ಇಳಿಯುತ್ತಿದ್ದಾರೆ ರೋಹಿತ್‌. ರೋಹಿತ್‌ಗೆ ವಿದ್ಯಾ ಪ್ರದೀಪ್‌ ನಾಯಕಿಯಾಗಿ
ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಈ ಚಿತ್ರ ಪದ್ಮಾವತಿ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಲವಿತ್‌ ಕುಮಾರ್‌ ಛಾಯಾಗ್ರಹಣವಿದೆ. ನಕುಲ್‌ ಅಭಯಂಕರ್‌ ಅವರ ಸಂಗೀತವಿದೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ರೋಹಿತ್‌ ಅವರು ಆ್ಯಂಗ್ರಿ ಯಂಗ್‌ ಮ್ಯಾನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next