Advertisement

ಕೋಚಿಂಗ್ ಅವಧಿ ಅಂತ್ಯ: ಭಾವನಾತ್ಮಕ ಪೋಸ್ಟ್ ಮಾಡಿದ ರವಿ ಶಾಸ್ತ್ರಿ

03:53 PM Nov 14, 2021 | Team Udayavani |

ಮುಂಬೈ: ಕಳೆದ ಹಲವು ವರ್ಷಗಳಿಂದ ಭಾರತ ತಂಡದ ಪ್ರಮುಖ ಕೋಚ್ ಆಗಿದ್ದ ರವಿ ಶಾಸ್ತ್ರಿ ಅವರ ಅಧಿಕಾರವಧಿ ಅಂತ್ಯವಾಗಿದೆ. ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ಇದೇ ವೇಳೆ ರವಿ ಶಾಸ್ತ್ರಿ ಟ್ಟಿಟ್ಟರ್ ನಲ್ಲಿ ಭಾವನಾತ್ಮಕ ಟಿಪ್ಪಣಿಯೊಂದನ್ನು ಪೋಸ್ಟ್ ಮಾಡಿದ್ದಾರೆ.

Advertisement

“ಈ ಅದ್ಭುತ ಪ್ರಯಾಣದಲ್ಲಿ ನನ್ನು ಭಾಗವಾಗಿ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾನು ಈ ನೆನಪುಗಳನ್ನು ಸದಾ ಪ್ರೀತಿಸುತ್ತೇನೆ ಮತ್ತು ನಾನು ಕ್ರೀಡೆಯನ್ನು ವೀಕ್ಷಿಸಲು ಸಾಧ್ಯವಾಗುವವರೆಗೂ ನಾನು ತಂಡವನ್ನು ಬೆಂಬಲಿಸುತ್ತೇನೆ” ಎಂದು ಶಾಸ್ತ್ರಿ ಬರೆದುಕೊಂಡಿದ್ದಾರೆ. ಅದಲ್ಲದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆಗೆ ಟ್ಯಾಗ್ ಮಾಡಿದ್ದಾರೆ.

ಶಾಸ್ತ್ರಿ ಕೋಚಿಂಗ್ ಅವಧಿಯಲ್ಲಿ ಭಾರತ ತಂಡ 43 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, 25ರಲ್ಲಿ ಗೆದ್ದು 13 ಪಂದ್ಯಗಳಲ್ಲಿ ಸೋತಿದೆ. ಅಲ್ಲದೆ, ಅವರು 76 ಏಕದಿನ ಮತ್ತು 65 ಟಿ20 ಪಂದ್ಯಗಳನ್ನು ಆಡಿದ್ದು, 51 ಏಕದಿನ ಮತ್ತು 43 ಟಿ20 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

ಇದನ್ನೂ ಓದಿ:ರಾಹುಲ್ ದ್ರಾವಿಡ್ ಜಾಗಕ್ಕೆ ವಿವಿಎಸ್ ಲಕ್ಷ್ಮಣ್ ಆಯ್ಕೆ: ಖಚಿತಪಡಿಸಿದ ಗಂಗೂಲಿ

ಶಾಸ್ತ್ರಿ ಅವರ ಅವಧಿಯಲ್ಲಿ ಉತ್ತಮ ದಾಖಲೆಯ ಹೊರತಾಗಿಯೂ, ಭಾರತವು ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ವಿಫಲವಾಗಿದೆ. 2019ರ ಏಕದಿನ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ನಲ್ಲಿ ಸೋತರೆ, ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ಸೋಲನುಭವಿಸಿತ್ತು. ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಸೆಮಿ ಫೈನಲ್ ತಲುಪಲೂ ಸಾಧ್ಯವಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next