Advertisement
ಹೊಸದಿಲ್ಲಿ: ತಿಂಗಳಲ್ಲಿ ನೀಡಲಾಗುವ ನಾಲ್ಕು ಉಚಿತ ವಹಿವಾಟಿನ ನಂತರ ಹಾಗೂ ವಿತ್‌ಡ್ರಾ ಮತ್ತು ಡಿಪಾಸಿಟ್‌ಗಳ ಮೇಲೆ ಶುಲ್ಕ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, ಹೆಚ್ಚಿನ ಮಾಹಿತಿ ಸಿಕ್ಕ ಬಳಿಕ ಪರಿಶೀಲಿಸುವುದಾಗಿ ಹೇಳಿದ್ದಾರೆ. ಡಿಜಿಟಲ್ ಪಾವತಿ ಬಳಕೆದಾರರ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳ ಆಗಿದೆ. 1.72 ಕೋಟಿಗೂ ಜಾಸ್ತಿ ಜನರು ಸರಕಾರದ ಭೀಮ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ವಹಿವಾಟು ಮೇಲಿನ ಶುಲ್ಕಕ್ಕೆ ಸಂಬಂಧಿಸಿ ಪ್ರತಿಷ್ಠಿತ ಬ್ಯಾಂಕ್‌ಗಳಾದ ಎಚ್‌ಡಿಎಫ್ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್‌ಗಳು ಹೊಸ ನಿಯಮಗಳನ್ನು ಪ್ರಕಟಿಸಿ, ಮಾರ್ಚ್ 1ರಿಂದಲೇ ಇದು ಜಾರಿಗೆ ಬರುವುದಾಗಿ ಪ್ರಕಟಿಸಿತ್ತು. – ತಿಂಗಳಿನ ನಾಲ್ಕು ಉಚಿತ ವಹಿವಾಟಿನ ಬಳಿಕ ಐದನೇ ವಹಿವಾಟು ಅಂದರೆ, ಪ್ರತಿ ವಿತ್‌ಡ್ರಾ ಮತ್ತು ಡಿಪಾಸಿಟ್‌ಗೆ (ಪ್ರತಿ ಸಾವಿರ ವಹಿವಾಟಿಗೆ 5.ರೂ.ನಂತೆ) ಕನಿಷ್ಠ 150 ರೂ ಶುಲ್ಕ ವಿಧಿಸಲಾಗುತ್ತದೆ.
Related Articles
Advertisement
– ಎಟಿಎಂ ನಿಯಮ ಬದಲಾವಣೆ ಇಲ್ಲ! ಎಟಿಎಂ ಬಳಕೆಗೆ ಸಂಬಂಧಿ ಗೊಂದಲ ಬೇಕಾಗಿಲ್ಲ. ಈಗಾಗಲೇ ಚಾಲ್ತಿಯಲ್ಲಿರುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
– ಖಾತೆ ಹೊಂದಿರುವ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ತಿಂಗಳಿಗೆ ಐದು ಬಾರಿ ಹಣ ಪಡೆದರೆ (ವಿತ್‌ಡ್ರಾ) ಅವು ಉಚಿತ. ಆದರೆ 6ನೇ ವಹಿವಾಟಿನಿಂದ 20 ರೂ. ಸೇವಾ ಶುಲ್ಕ ನೀಡಬೇಕಾಗುತ್ತದೆ.
– ಖಾತೆ ಇಲ್ಲದ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಬಾರಿ ಹಣ ಪಡೆದರೆ ಅವು ಉಚಿತ. ಆದರೆ 6ನೇ ವಹಿವಾಟಿನಿಂದ 20 ರೂ. ಸೇವಾ ಶುಲ್ಕ ನೀಡಬೇಕಾಗುತ್ತದೆ.
ಎಚ್‌ಡಿಎಫ್ಸಿಯಿಂದ ತೆರಿಗೆ – ತಿಂಗಳಲ್ಲಿನ ನಾಲ್ಕು ಉಚಿತ ವಹಿವಾಟಿನ ನಂತರದ ವಹಿವಾಟಿಗೆ ಪಡೆಯಲಾಗುವ 150 ರೂ. ಶುಲ್ಕದ ಜತೆ ತೆರಿಗೆ ಮತ್ತು ಸೆಸ್ ಕೂಡ ಪಡೆಯಲಾಗುತ್ತದೆ. – ಖಾತೆ ಹೊಂದಿರುವ ಬ್ಯಾಂಕ್‌ನಲ್ಲಿ ವಿತ್‌ಡ್ರಾ ಮತ್ತು ಡಿಪಾಸಿಟ್ ಮಿತಿ 2 ಲಕ್ಷ ರೂ. ಆಗಿದ್ದು, ಇದಕ್ಕಿಂತ ಜಾಸ್ತಿ ವಹಿವಾಟು ಮಾಡಿದಲ್ಲಿ ಅವೆಲ್ಲದಕ್ಕೂ ಶುಲ್ಕ ನೀಡಬೇಕಾಗುತ್ತದೆ. ಪರಿಣಾಮ ಏನೇನು, ಹೇಗೆ?
– ಉಳಿತಾಯ ಮತ್ತು ವೇತನ (ಸ್ಯಾಲರಿ) ಖಾತೆದಾರರಿಗೆ ವಹಿವಾಟು ಶುಲ್ಕ ಅನ್ವಯವಾಗಲಿದೆ.
– ಪ್ರೈಮ್, ಕ್ಲಾಸಿಕ್, ಪ್ರಿಫರ್ಡ್, ಇಂಪೇರಿಯ ಅಥವಾ ಇತರೆ ಗ್ರಾಹಕರಿಗೂ ಅನ್ವಯವಾಗಲಿದೆ.