Advertisement

ರವಿ ಪೂಜಾರಿ ಸಹಚರನಿಗೆ ಗುಂಡೇಟು; ಆಟೋ ಚಾಲಕನ ಕೊಲೆ ಪ್ರಕರಣದ ಆರೋಪಿ

01:21 PM Jul 29, 2021 | Team Udayavani |

ಬೆಂಗಳೂರು: ಆಟೋ ಚಾಲಕನನ್ನು ಅಪಹರಿಸಿ, ಹತ್ಯೆಗೈದಿದ್ದ ಭೂಗತ ಪಾತಕಿ ರವಿ ಪೂಜಾರಿಯ ಸಹಚರ ಸೇರಿ ಇಬ್ಬರು ಆರೋಪಿಗಳ ಕಾಲಿಗೆ ಇಂದಿರಾನಗರ ಪೊಲೀಸರು, ಗುಂಡೇಟು ಹೊಡೆದುಬಂಧಿಸಿದ್ದಾರೆ.ಕೋಲಾರ ಮೂಲದ ಕವಿರಾಜ್‌(45), ಆನೇಕಲ್‌ನ  ಮೂಲದ ಅಂಬರೀಶ್‌ (35) ಬಂಧಿತರು. ಇದೇ ವೇಳೆ ಕೊಲೆಗೆ ಸಹಕರಿಸಿದ್ದ ಕವಿರಾಜ್‌ನ ಸಹಚರರಾದ ಶಿವಪ್ರಸಾದ್‌ ಹಾಗೂ ನವೀನ್‌ ಎಂಬುವರನ್ನು ಬಂಧಿಸಲಾಗಿದೆ.

Advertisement

ಆರೋಪಿಗಳ ಹಲ್ಲೆಯಿಂದ ಎಎಸ್‌ಐ ಗೋವಿಂದ ರಾಜು ಮತ್ತು ಕಾನ್‌ಸ್ಟೆಬಲ್‌ ವಿಜಯ್‌ ಕುಮಾರ್‌ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ, ಕವಿರಾಜ್‌ ಎಂಟು ತಿಂಗಳ ಹಿಂದೆ ಶಾಸಕ ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು,ಜು.5ರಂದು ಆಟೋ ಚಾಲಕ ಮತ್ತು ಫೈನಾನ್ಸಿಯರ್‌ ವಿಜಯ್‌ ಕುಮಾರ್‌ನನ್ನು ಅಪಹರಿಸಿ ದ್ದರು. ಅಪಹರಣದ ಬಳಿಕ ಹಣ ತರಿಸುವಂತೆ ಬೆದರಿಕೆ ಹಾಕಿದ್ದರು. ವಿಜಯ್‌ ಕುಮಾರ್‌ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ಮಾಡಿ ಹೊಸೂರು ರಸ್ತೆಯ ಬಳಿ ಬಿಸಾಡಿ ಹೋಗಿದ್ದರು. ವಿಜಯ್‌ಕುಮಾರ್‌ ಕುಟುಂಬಸ್ಥರು, ಜು.9ರಂದು ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ªರು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕವಿರಾಜ್‌ ಮತ್ತು ಅಂಬರೀಷ್‌ ಹೆಸರು ಬಾಯಿಬಿಟ್ಟಿದ್ದರು ಎಂದು ತಿಳಿಸಿದ್ದಾರೆ.

ಆರೋಪಿಗಳ ಕಾಲಿಗೆ ಗುಂಡೇಟು: ಆರೋಪಿಗಳು, ಬೈಯಪ್ಪನಹಳ್ಳಿ ಸಮೀಪದ ಎನ್‌ಜಿಎಫ್ ಕಾರ್ಖಾನೆ ಬಳಿ ಅವಿತುಕೊಂಡಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಂದಿರಾನಗರ ಠಾಣೆ ಇನ್‌ಸ್ಪೆಕ್ಟರ್‌ ಹರೀಶ್‌, ಎಎಸ್‌ಐ ಗೋವಿಂದರಾಜು, ಹೆಡ್‌ಕಾನ್‌ ಸ್ಟೇಬಲ್‌ ವಿಜಯ್‌ ಕುಮಾರ್‌, ಬುಧವಾರ ಬೆಳಗ್ಗೆ ಆರೋಪಿಗಳ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಆರೋಪಿಗಳು, ಪರಾರಿಯಾಗಲು ಯತ್ನಿಸಿದ್ದಾರೆ. ಎಎಸ್‌ಐ ಗೋವಿಂದ್‌ ರಾಜ್‌, ಹೆಡ್‌ಕಾನ್‌ ಸ್ಟೇಬಲ್‌ ವಿಜಯ್‌ಕುಮಾರ್‌ ಹಿಡಿಯಲು ಹೋದಾಗ, ಅವರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಪ್ರಾಣ ರಕ್ಷಣೆಗಾಗಿ ಇನ್‌ಸ್ಪೆಕ್ಟರ್‌ ಹರೀಶ್‌, ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಆರೋಪಿಗಳು ಹಲ್ಲೆಗೆ ಮುಂದಾಗಿದ್ದು ಆತ್ಮ ರಕ್ಷಣೆಗಾಗಿ ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊಲೆಗೆ ಕಾರಣವೇನು: ಮೃತವಿಜಯ್‌ಕುಮಾರ್‌ಆಟೋ ಚಾಲಕನಾಗಿದ್ದು, ತಾನೊಬ್ಬ ಫೈನಾನ್ಸಿಯರ್‌ ಎಂದು ಹೇಳಿಕೊಂಡು ಓಡಾಡುತ್ತಿದ್ದನು. ಆರೋಪಿ ಅಂಬರೀಶ್‌, ಈತನಿಗೆ ಮೊದಲಿನಿಂದಲೂ ಪರಿಚಯಸ್ಥನಾಗಿದ ªನು. ಒಮ್ಮೆ ಅಂಬರೀಶ್‌ ಹಣದ ಸಹಾಯ ಕೇಳಿ ದಾಗ ವಿಜಯ್‌ ಕುಮಾರ್‌ ಹಣ ನೀಡಿರಲಿಲ್ಲ. ಬಳಿಕ ಅಂಬರೀಶ್‌ ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದನು. ಮತ್ತೂಬ್ಬ ಆರೋಪಿ, ಕವಿರಾಜ್‌ ಸಹ ಶಾಸಕ ವರ್ತೂರು ಪ್ರಕಾಶ್‌ ಅಪಹರಣ
ಪ್ರಕರಣದಲ್ಲಿ ಜೈಲು ಸೇರಿದ್ದನು. ಜೈಲಿನಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಇದೇ ವೇಳೆ ವಿಜಯ ಕುಮಾರ್‌ ವಿಚಾರ ಪ್ರಸ್ತಾಪಿಸಿ, ಆತನನ್ನು ಅಪಹರಿಸಿ ಹಣ ವಸೂಲಿಗೆ ಸಂಚು ರೂಪಿಸಿದ್ದರು.

Advertisement

ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ಇಬ್ಬರು ವಿಜಯ್‌ ಕುಮಾರ್‌ನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವಿಜಯ್‌ ಕುಮಾರ್‌ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಹಲಸೂರು ಉಪವಿಭಾಗದ ಎಸಿಪಿ ಕುಮಾರ್‌ ಹಾಗೂ ಇಂದಿರಾನಗರ ಠಾಣೆ ಇನ್‌ಸೆ ³ಕ್ಟರ್‌ ಹರೀಶ್‌ ನೇತೃತ್ವದಲ್ಲಿ ‌ ತಂಡ ರಚಿಸಲಾಗಿತ್ತು.ಈವೇಳೆ ಅನುಮಾನದ ಮೇಲೆ ನವೀನ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ‌ ನಡೆಸಿದಾಗ ಕೊಲೆ ಹಾಗೂ ಆರೋಪಿಗಳ ಬಗ್ಗೆ ಬಾಯಿಬಿಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ವರ್ತೂರು ಪ್ರಕಾಶ್‌ ಅಪಹರಣ:2020ರ ನವೆಂಬರ್‌ 25ರಂದು ಶಾಸಕ ವರ್ತೂರು ಪ್ರಕಾಶ್‌ ಅವರನ್ನು ಕೋಲಾರದ ಫಾರ್ಮ್ಹೌಸ್‌ ಬಳಿ ಕಾರಿನಲ್ಲಿ ಬರುವಾಗ ಆರೋಪಿ ಕವಿರಾಜ್‌ ಹಾಗೂ ಸಹಚರರು ಅಡ್ಡಗಟ್ಟಿ ಅಪಹರಿಸಿ 30 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಮೂರು ದಿನಗಳ ಬಳಿಕ ಕಾರಿನಲ್ಲಿ ಸುತ್ತಾಡಿಸಿ 48 ಲಕ್ಷ ರೂ. ವಸೂಲಿ ಮಾಡಿದ್ದರು. ಈ ಬಗ್ಗೆ ವೈಟ್‌ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕೋಲಾರ ಪೊಲೀಸ್‌ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು. ನಂತರ ಕವಿರಾಜ್‌ ಸೇರಿ ಐದು ಮಂದಿಯನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದರು.

ಕವಿರಾಜ್‌ ಭೂಗತ ಪಾತಕಿ ರವಿಪೂಜಾರಿ ಸಹಚರ
ಆರೋಪಿ ಕವಿರಾಜ್‌, ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದಾನೆ. ಈತನ ವಿರುದ್ಧ ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣ ಮಾತ್ರವಲ್ಲದೆ,2007 ಫೆಬ್ರವರಿ 15ರಂದು ತಿಲಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಶಬನಂ ಡೆವಲಪರ್ಸ್‌ ಶೂಟೌಟ್‌ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದನು. ಈ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ಕವಿರಾಜ್‌ನನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದಿದ್ದ ಆರೋಪಿ, ಕಳೆದ ವರ್ಷ ನವೆಂಬರ್‌ನಲ್ಲಿ ಶಾಸಕ ವರ್ತೂರು ಪ್ರಕಾಶ್‌ರನ್ನು ಅಪಹರಣ ಮಾಡಿ ಹಣ ವಸೂಲಿ ಮಾಡಿದ್ದನು. ಇದೀಗ ಆಟೋ ಚಾಲಕನನ್ನು ಕೊಲೆಗೈದುಜೈಲು ಸೇರಿದ್ದಾನೆ. ಅಲ್ಲದೆ, ಈತನ ವಿರುದ್ಧ ಬೆಂಗಳೂರು ಸೇರಿ ರಾಜ್ಯದಲ್ಲಿ ಸುಮಾರು 12 ಪ್ರಕರಣಗಳು ದಾಖಲಾಗಿವೆ. ಹಣಕ್ಕಾಗಿ ಈ ಹಿಂದಿನಿಂದಲೂ ಈತ ಅಪಹರಣ, ಕೊಲೆ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾನೆ. ಅಲ್ಲದೆ, ಇದೇ ಮೊದಲ ಬಾರಿಗೆ ಆರೋಪಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next