Advertisement

ರವಿ ಚನ್ನಣ್ಣನವರ್‌ ಕೃತಿ ಲೋಕಾರ್ಪಣೆ

12:36 PM Oct 25, 2018 | |

ಬೆಂಗಳೂರು: ಜೀವನದಲ್ಲಿ ಅವಮಾನ ಕ್ಕೊಳ ಗಾದ ವ್ಯಕ್ತಿ ಭವಿಷ್ಯದಲ್ಲಿ ದೊಡ್ಡ ಸಾಧಕ ನಾಗುತ್ತಾನೆ ಎಂದು ಗದಗ-ವಿಜಯಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Advertisement

ನಗರದಲ್ಲಿ ಬುಧವಾರ ಆಯೋಜಿಸಿದ್ದ ಲೇಖಕ ಎರ್ರೆಪ್ಪಗೌಡ ಚಾನಾಳ್‌ ಬರೆದ “ನಮ್ಮೊಳಗೊಬ್ಬ ರವಿ ಡಿ ಚನ್ನಣ್ಣನವರ್‌’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅವ ಮಾನಕ್ಕಿಂತ ದೊಡ್ಡ ವರ ಬೇರೆ ಯಾವುದೂ ಇಲ್ಲ. ಇದನ್ನು ಅನುಭವಿಸಿದವರು ಸಾಧಕ
ರಾಗುತ್ತಾರೆ. ಅವಮಾನವೂ ನಮ್ಮೊಳಗೆ ಛಲ ಹುಟ್ಟಿಸುತ್ತದೆ. ಆಗ ಆ ವಕ್ತಿಗೆ ಸಾಧಿಸಬೇಕೆಂಬ ಹಠ ಹುಟ್ಟುತ್ತದೆ ಎಂದು ತಿಳಿಸಿದರು.

ಸಾಧಕರು ಓದಲೇ ಬೇಕೆಂಬ ನಿಯಮ ವಿಲ್ಲ. ಅನಕ್ಷರಸ್ಥರಾದ ಬಹಳಷ್ಟು ಮಂದಿ ಆರ್ಥಿಕವಾಗಿ ಸಬಲರಾಗಿರುವ ಉದಾ
ಹರಣೆಗಳಿವೆ. ಬಡತನ ಎಂಬುದನ್ನು ಬದಲಾಯಿಸಿ ಕೊಂಡು, ಪ್ರತಿದಿನ ಹೊಸ ಮನುಷ್ಯನಾಗಿ ಹುಟ್ಟಬೇಕು ಎಂದರು.

ಪಶ್ಚಿಮ ವಿಭಾಗದ ಉಪ ಪೊಲೀಸ್‌ ಆಯುಕ್ತ ರವಿ.ಡಿ.ಚನ್ನಣ್ಣನವರ್‌ ಮಾತ ನಾಡಿ, ಶಾಲಾ ದಿನಗಳಲ್ಲಿ ಅಸಡ್ಡೆಯಿಂದ ಬದುಕುತ್ತಿದ್ದೆ. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ತತ್ವಾದರ್ಶಗಳನ್ನು ಅಧ್ಯಯನ ಮಾಡಿದಾಗ ಏನಾದರೂ ಸಾಧಿಸಬೇಕೆಂಬ ಛಲ ಮೂಡಿತು. ಈ ಹಿನ್ನೆಲೆಯಲ್ಲಿ ಐಪಿಎಸ್‌ ಅಧಿಕಾರಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.

ಪೊಲೀಸ್‌ ಮುಖ್ಯ ಪೇದೆ ಎನ್‌.ಚಂದ್ರು “ನಮ್ಮೊಳಗೊಬ್ಬ ರವಿ ಡಿ ಚನ್ನಣ್ಣನವರ್‌’ ಕೃತಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ಲೇಖಕ ಎರ್ರೆಪ್ಪಗೌಡ ಚಾನಾಳ್‌ ಮತ್ತಿತರರು ಉಪಸ್ಥಿತರಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next