Advertisement

ನಾನ್‌ ಮಲಗೋದೇ ಬೆಳಗಿನ ಜಾವಕ್ಕೆ..;ಜೈಲಿನಲ್ಲಿ ಬೆಳಗೆರೆ 

09:41 AM Dec 12, 2017 | Team Udayavani |

ಬೆಂಗಳೂರು: ಸಹೋದ್ಯೋಗಿ ಸುನೀಲ್‌ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಪ್ರಕರಣದಲ್ಲಿ
ಬಂಧನಕ್ಕೊಳಗಾಗಿರುವ ರವಿ ಬೆಳಗೆರೆಗೆ ಜೈಲಿನ ಆಸ್ಪತ್ರೆಯಲ್ಲಿ ಮೊದಲ ರಾತ್ರಿ ಕಳೆದಿದ್ದು, ನಸುಕಿನ 2 ಗಂಟೆಯ ವರೆಗೂ ಎಚ್ಚರವಾಗಿಯೇ ಇದ್ದು ಆ ಬಳಿಕ ಮಲಗಿರುವುದಾಗಿ  ವರದಿಯಾಗಿದೆ. 

Advertisement

ಜೈಲಿನ ಸಿಬಂದಿ  2 ಗಂಟೆ ಗಳೆಯಿತು ಸಾರ್‌..ಮಲಗಿ ಎಂದಿದ್ದಕ್ಕೆ ಬೆಳಗರೆ  ‘ನಾನು ಮಲಗೋದೇ  ಬೆಳಗಿನ ಜಾವಕ್ಕೆ ಕಣಯ್ಯ’ ಎಂದಿರುವುದಾಗಿ  ವರದಿಯಾಗಿದೆ. 

ಬೆಳಗ್ಗೆ 6.30 ಕ್ಕೆ ಎಬ್ಬಿಸಿದಾಗ ನಿತ್ಯ ಕರ್ಮಗಳನ್ನು ಮುಗಿಸಿದ ಬೆಳಗೆರೆಗೆ ಚಿತ್ರಾನ್ನ ನೀಡಲಾಗಿದೆ. ‘ಏನಯ್ಯಾ..ನನಗೆ ಚಿತ್ರಾನ್ನ ಕೋಡ್ತೀರಾ’ ಎಂದು ಪ್ರಶ್ನಿಸಿ ಕೊನೆಗೆ ವಿಧಿಯಿಲ್ಲದೆ ಚಿತ್ರಾನ್ನ ಸೇವಿಸಿರುವುದಾಗಿ  ವರದಿಯಾಗಿದೆ.

ಪುತ್ರಿ  ಚೇತನಾ ಬೆಳಗೆರೆ ಅವರು ಜೈಲಿಗೆ ಆಗಮಿಸಿದ್ದು, ಮನೆಯಲ್ಲಿ ಸಿದ್ದಪಡಿಸಿದ್ದ ಉಪಹಾರವನ್ನು ತಂದೆಗೆ ನೀಡಲು ತಂದಿರುವುದಾಗಿ ವರದಿಯಾಗಿದೆ. 

ಕಳೆದ ನಾಲ್ಕು ದಿನಗಳಿಂದ ಸಿಸಿಬಿ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ರವಿ
ಬೆಳಗೆರೆಯನ್ನು ನ್ಯಾಯಾಲಯ ಆದೇಶದನ್ವಯ ಕೇಂದ್ರ ಕಾರಾಗೃಹಕ್ಕೆ ಸೋಮವಾರ ಕಳುಹಿಸಲಾಗಿತ್ತು.
ಈ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಪ್ರತ್ಯೇಕ ವಾರ್ಡ್‌ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next