Advertisement

ಪಂಚಭಾಷೆಗಳಲ್ಲಿ “ರಾವಣ’ದರ್ಶನ

10:15 AM Mar 04, 2020 | Lakshmi GovindaRaj |

ಈಗಾಗಲೇ ಕನ್ನಡ, ತಮಿಳು, ತೆಲುಗು. ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಾಯಕನಾಗಿ, ಖಳನಾಯಕನಾಗಿ ಪರಿಚಿತವಾಗಿರುವ ಬಹುಭಾಷಾ ನಟ ಅನೂಪ್‌ ಸಿಂಗ್‌ ಠಾಕೂರ್‌ ಈಗ ಮಾಡ್ರನ್‌ ರಾವಣನಾಗಿ ತೆರೆಮೇಲೆ ಬರುವ ತಯಾರಿಯಲ್ಲಿ ದ್ದಾರೆ. ಹೌದು, ಅನೂಪ್‌ ಸಿಂಗ್‌ ಠಾಕೂರ್‌ ಅಭಿನಯದ ಹೊಸಚಿತ್ರಕ್ಕೆ “ಮಿಸ್ಟರ್‌ ರಾವಣ’ ಎಂದು ಹೆಸರಿಡಲಾಗಿದ್ದು, ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಸೇರಿದಂತೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

Advertisement

“ಕುಂದನ್‌ ಆರ್ಟ್ಸ್’ ಬ್ಯಾನರ್‌ನಲ್ಲಿ ಇಂದ್ರಜಿತ್‌ ಕುಮಾರ್‌ ನಿರ್ಮಿಸುತ್ತಿರುವ “ಮಿಸ್ಟರ್‌ ರಾವಣ” ಚಿತ್ರಕ್ಕೆ ಕುಂದನ್‌ ರಾಜ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಮುಂಬೈನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಸುಮಾರು ಹತ್ತು ದಿನಗಳ ಕಾಲ ಮುಂಬೈನಲ್ಲೇ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.

ಉಳಿದಂತೆ ಬೆಂಗಳೂರು, ಅನಂತಪುರಂ, ವಯನಾಡ್‌, ಚೆನ್ನೈ, ಹೈದರಾಬಾದ್‌ ಮೊದಲಾದ ಕಡೆಗಳಲ್ಲಿ ಎರಡು ಮತ್ತು ಮೂರನೇ ಹಂತದ ಚಿತ್ರೀಕರಣಕ್ಕೆ ಪ್ಲಾನ್‌ ಮಾಡಿಕೊಂಡಿದೆ. ಇನ್ನು “ಮಿಸ್ಟರ್‌ ರಾವಣ’ ಚಿತ್ರದಲ್ಲಿ ಅನೂಪ್‌ ಸಿಂಗ್‌ ಠಾಕೂರ್‌ ಅವರೊಂದಿಗೆ ಮತ್ತೂಬ್ಬ ಬಹುಭಾಷಾ ನಟ ನಟ ಕಬೀರ್‌ ಸಿಂಗ್‌, ಸಲೋನಿ, ತಮನ್ನ ನ್ಯಾಸ್‌, ಜಾನಿ ಲಿವರ್‌, ಮೋನಿಕಾ ಠಾಕೂರ್‌, ಮಧುಬಾಲ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದಲ್ಲಿ 6 ಹಾಡುಗಳಿದ್ದು, 4 ಭರ್ಜರಿ ಸಾಹಸ ಸನ್ನಿವೇಶಗಳು, 7 ಚೇಸಿಂಗ್‌ ದೃಶ್ಯಗಳು ಇರಲಿದೆಯಂತೆ. “ಮಿಸ್ಟರ್‌ ರಾವಣ’ ಚಿತ್ರಕ್ಕೆ ಖ್ಯಾತ ಛಾಯಾಗ್ರಹಕ ಸುರೇಂದ್ರ ರೆಡ್ಡಿ ಕ್ಯಾಮರಾ ಹಿಡಿಯುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ, ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ “ಮಿಸ್ಟರ್‌ ರಾವಣ’ ಕನ್ನಡ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದ್ದಾನೆ ಅನ್ನೋದು ಈ ವರ್ಷದ ಕೊನೆಗೆ ಗೊತ್ತಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next