Advertisement

ವಿವಿಐಪಿ ಕಾಪ್ಟರ್‌ ಖರೀದಿ ಹಗರಣ : ರಾಜೀವ್‌ ಸೆಕ್ಸೇನಾಗೆ ರತುಲ್‌ ಬೆದರಿಕೆ

09:43 AM Nov 08, 2019 | Team Udayavani |

ಹೊಸದಿಲ್ಲಿ: ವಿವಿಐಪಿ ಕಾಪ್ಟರ್‌ ಖರೀದಿ ಹಗರಣದಲ್ಲಿ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಸೋದರ ಸಂಬಂಧಿ ರತುಲ್‌ಪು ಪುರಿ, ಮತ್ತೂಬ್ಬ ಆರೋಪಿ ರಾಜೀವ್‌ ಸೆಕ್ಸೇನಾಗೆ ಬೆದರಿಕೆ ಹಾಕಿದ್ದಾರೆಂದು ಇ.ಡಿ. ಆರೋಪಿಸಿದೆ.

Advertisement

ತಮ್ಮ ತಂದೆ ಮತ್ತು ಸೋದರ ಸಂಬಂಧಿ ವಿರುದ್ಧ ಇರುವ ಮಾಹಿತಿಯನ್ನು ತನಿಖಾ ಸಂಸ್ಥೆಗಳ ಜತೆಗೆ ಹಂಚಿಕೊಳ್ಳಬಾರದು ಎಂದು ಒತ್ತಡ ಹೇರಿದ್ದಾರೆ ಎಂದು ವಿಶೇಷ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಸಕ್ಸೇನಾರ ಕಾರ್ಪೊರೆಟ್‌ ಮಟ್ಟದ ಲಿಂಕ್‌ಗಳನ್ನು ಉಪಯೋಗಿಸಿಕೊಂಡು ಗಿಡೋ ಹಶ್ಕೆ, ಕಾರ್ಲೋಸ್‌ ಗೆರೋಸಾ ಮತ್ತು ಕ್ರಿಶ್ಚಿಯನ್‌ ಮೈಕೆಲ್‌ ಜೇಮ್ಸ್‌ರಿಂದ ಲಂಚದ ಮೂಲಕ ಬಂದ ಹಣ ಸ್ವೀಕರಿಸಲಾಗಿದೆ ಎಂದೂ ಇ.ಡಿ. ದೂರಿದೆ.

Advertisement

Udayavani is now on Telegram. Click here to join our channel and stay updated with the latest news.

Next