ಹಿರೇಕೆರೂರ: ಕುರಿಗಳ ಶೆಡ್‌ನಲ್ಲಿ ಮಲಗಿದ್ದ ವ್ಯಕ್ತಿಯನ್ನು ಕಟ್ಟಿಹಾಕಿದ ದುಷ್ಕರ್ಮಿಗಳು, 20 ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಹೊರವಲಯದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ತಡರಾತ್ರಿ ಶೆಡ್‌ಗೆ ನುಗ್ಗಿದ ಸುಮಾರು ಏಳೆಂಟು ಜನ ಮುಸುಕುಧಾರಿಗಳು, ಅಲ್ಲಿ ಮಲಗಿದ್ದ ಮಾಲೀಕ ಬಸನಗೌಡ ಪುರದಕೇರಿ ಅವರನ್ನು ಕಟ್ಟಿಹಾಕಿ, ಶೆಡ್‌ನಲ್ಲಿದ್ದ ಎಲ್ಲ 20 ಕುರಿಗಳು ಹಾಗೂ ಮೊಬೈಲ್ ಕಳ್ಳತನ ಮಾಡಿ, ಬೈಕ್ ಜಖಂಗೊಳಿಸಿ ಪರಾರಿಯಾಗಿದ್ದಾರೆ.
ಪೊಲೀಸ್ ವಾಹನ ಅಪಘಾತ: ವಿಷಯ ತಿಳಿದು ತಡರಾತ್ರಿ ಸ್ಥಳಕ್ಕೆ ಆಗಮಿಸುತ್ತಿದ್ದ ರಟ್ಟಿಹಳ್ಳಿ ಪೊಲೀಸ್ ಠಾಣೆಯ ರಾತ್ರಿ ಗಸ್ತು ವಾಹನ 112 ಹಳ್ಳೂರು ಗ್ರಾಮದ ಸಮೀಪ ಅಪಘಾತಕ್ಕೀಡಾಗಿದೆ. ವಾಹನ ಚಾಲಕ ಪ್ರವೀಣ ಎಂಬುವವರ ತಲೆಗೆ ಗಂಭೀರ ಗಾಯವಾಗಿದೆ.
ಇದನ್ನೂ ಓದಿ:ಇಂದು ಹಂಪಿ ಸರಳ ಉತ್ಸವ : ತುಂಗಾರತಿಗೆ ಭರದ ಸಿದ್ಧತೆ
ಇನ್ನೊಬ್ಬ ಮುಖ್ಯಪೇದೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.