Advertisement

ತುಳುಕೂಟ ಕುಡ್ಲ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪ್ರಕಟ

11:53 PM Mar 18, 2023 | Team Udayavani |

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಾಯೋಜನೆಯಲ್ಲಿ ತುಳುಕೂಟ ಕುಡ್ಲ ನೀಡುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿ 2022 – 23 ಅನ್ನು ಪ್ರಕಟಿಸಲಾಗಿದೆ.

Advertisement

ಅಪ್ರಕಟಿತ ಹೊಸ ನಾಟಕ ಕೃತಿಗೆ ಪ್ರತೀ ವರ್ಷ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳನ್ನು ಡಾ| ಹೆಗ್ಗಡೆ ಅವರು ತಮ್ಮ ತೀರ್ಥರೂಪರ ನೆನಪಿಗಾಗಿ ಕಳೆದ 46 ವರ್ಷಗಳಿಂದ ನೀಡುತ್ತಾ ಬರುತ್ತಿದ್ದಾರೆ. ಈ ಕೆಳಗಿನವರು ಪ್ರಶಸ್ತಿ ವಿಜೇತರು. ಪ್ರಶಸ್ತಿ ಮೊತ್ತವು ಕ್ರಮವಾಗಿ 10,000 ರೂ, 8,000 ರೂ ಮತ್ತು 6,000 ರೂ. ನಗದು ಬಹುಮಾನವಾಗಿರುತ್ತದೆ.

ಪ್ರಥಮ: ದೀಪಕ್‌ ಎಸ್‌ . ಕೋಟ್ಯಾನ್‌ ಕುತ್ತೆತ್ತೂರು. (ಮಾಯದಪ್ಪೆ ಮಾಯಂದಾಲ್‌), ದ್ವಿತೀಯ: ಪರಮಾನಂದ ಸಾಲಿಯಾನ್‌ ಸಸಿಹಿತ್ಲು (ಪುರ್ಸೆ ಬಿರ್ಸೆ ಶ್ರೀ ರಾಮೆ), ತೃತೀಯ: ಅಕ್ಷಯ ಆರ್‌. ಶೆಟ್ಟಿ, ಪಡಂಗಡಿ (ಪೆರ್ಗ).
ವಿಶ್ರಾಂತ ಪತ್ರಕರ್ತ ಮನೋಹರ ಪ್ರಸಾದ್‌, ತುಳು-ಕನ್ನಡ ಸಾಹಿತಿ ಮುದ್ದು ಮೂಡುಬೆಳ್ಳೆ ಹಾಗೂ ರಂಗಕರ್ಮಿ ವಿ.ಜಿ. ಪಾಲ್‌ ಅವರನ್ನು ಒಳಗೊಂಡ ಸಮಿತಿ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಿದೆ.

ಎ. 15ರಂದು ಪ್ರಶಸ್ತಿ ಪ್ರದಾನ
ಎ. 15ರಂದು ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ ತುಳುಕೂಟ ಆಚರಿಸುವ ಬಿಸುಪರ್ಬ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಬಿ. ದಾಮೋದರ ನಿಸರ್ಗ ಮತ್ತು ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next