Advertisement
ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ರಾಮನ ಕುರಿತಾಗಿ ವಿಚಾರ ಪ್ರಸ್ತಾವಿಸಿ”ರಾಮ ದೇವರೆ ಅಲ್ಲ, ನರಮಾನವ. ಕವಿ ವಾಲ್ಮೀಕಿ ರಾಮನನ್ನು ದೇವರು ಎಂದು ಎಲ್ಲೂ ಹೇಳಿಲ್ಲ. ರಾಮ ಜಾತಿ ವಾದಿಯಾಗಿದ್ದು, ಚಾತುರ್‌ವರ್ಣ ಪದ್ಧತಿಯನ್ನು ಬೆಂಬಲಿಸುತ್ತಿದ್ದ. ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸಿದ. ಬ್ರಾಹ್ಮಣರ ಮಾತು ಕೇಳಿ ರಾಮ ಶಂಭೂಕನ ತಲೆ ಕತ್ತರಿಸಿದ್ದ. ರಾಮನಿಗೆ ಈಗ ದೇವಸ್ಥಾನ ಕಟ್ಟಲು ಹೊರಟಿದ್ದಾರೆ. ನಾವು ಇದನ್ನೆಲ್ಲಾ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ” ಎಂದರು.
Related Articles
Advertisement
ಬ್ರಾಹ್ಮಣನೊಬ್ಬ ತನ್ನ ಮಗನ ಸಾವಿಗೆ ನ್ಯಾಯ ಕೇಳಲು ರಾಮನ ಆಸ್ಥಾನಕ್ಕೆ ಬರುತ್ತಾನೆ. ‘ಎಲೈ ರಾಜನೇ, ನೀನೇನೋ ಅನ್ಯಾಯ ಮಾಡಿರಬೇಕು, ಆದ್ದರಿಂದ ಯಾವ ತಪ್ಪನ್ನೂ ಮಾಡದ ನನ್ನ ಮಗ ಸಾವನ್ನಪ್ಪಿದ್ದಾನೆ’ ಎಂದು ರಾಮನ ವಿರುದ್ಧವೇ ಆರೋಪಿಸುತ್ತಾನೆ.
ಆ ವೇಳೆ ನಾರದಮುನಿಗಳು ರಾಮನಿಗೆ ಬ್ರಾಹ್ಮಣ ವಟುವಿನ ಸಾವಿಗೆ ಶಂಭೂಕನ ತಪಸ್ಸು ಕಾರಣ ಎಂದು ತಿಳಿಸುತ್ತಾರೆ. ತಕ್ಷಣ ರಾಮ ಶಂಭೂಕನಿದ್ದಲ್ಲಿಗೆ ತೆರಳಿ ಅವನ ತಪಸ್ಸಿನ ಕಾರಣ ಕೇಳುತ್ತಾನೆ.
ಇದಕ್ಕುತ್ತರವಾಗಿ ಶಂಭೂಕ ‘ರಾಮ, ನಾನು ಶೂದ್ರ ಕುಟುಂಬದಲ್ಲಿ ಜನಿಸಿದವ. ನನ್ನ ಕಠಿಣ ಪರಿಶ್ರಮದಿಂದ ದೇವತೆಗಳನ್ನು ಮೆಚ್ಚಿಸಿ, ದೇವಲೋಕವನ್ನು ನನ್ನದಾಗಿ ಮಾಡಿಕೊಂಡು ಸಶರೀರಿಯಾಗಿ ಸ್ವರ್ಗವನ್ನು ಪ್ರವೇಶಿಸಬೇಕೆಂದು ಘೋರ ತಪಸ್ಸನ್ನು ಮಾಡುತ್ತಿದ್ದೇನೆ’ ಎನ್ನುತ್ತಾನೆ.
ಅದಕ್ಕೆ ರಾಮ ‘ಅಯ್ಯಾ ನಿನ್ನ ತಪಸ್ಸು, ಪರಿಶ್ರಮ ಒಳ್ಳೆಯದೇ ಆದರೂ, ಅದರ ಹಿಂದಿನ ಕಾರಣ ಅಸಾತ್ವಿಕವಾದದ್ದು’ ಎಂಬ ಕಾರಣ ನೀಡಿ ಅವನ ತಲೆ ಕಡಿಯುತ್ತಾನೆ ಎನ್ನುವುದು ಕಥೆಯಲ್ಲಿ ಉಲ್ಲೇಖವಿದೆ.