ಚಿಕ್ಕಮಗಳೂರು : ‘ನಾವು ನಿಮಗೆ ಕಿಟ್ ನೀಡಿದ್ದೇವೆ, ಹಾಗಾಗಿ ನಿಮಗೆ ಪಡಿತರ ಕೊಡೋದಿಲ್ಲ’ ಎಂದು ನ್ಯಾಯಬೆಲೆ ಅಂಗಡಿಯಲ್ಲಿ ಹೇಳಿದ ಪರಿಣಾಮ ಜನರು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕಳ್ಳಿಕೊಪ್ಪಲು ಗ್ರಾಮದ 47 ಕುಟುಂಬದ 75 ಜನರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಎಲ್ಲರಿಗೂ ಕ್ವಾರಂಟೈನ್ ಮಾಡಿದ್ದ ತಾಲೂಕು ಆಡಳಿತ ದಿನಸಿ ಕಿಟ್ ನೀಡಿತ್ತು. 10 ಕೆ.ಜಿ. ಅಕ್ಕಿ, ಎಣ್ಣೆ, ಬೇಳೆ, ಉಪ್ಪು ಸೇರಿ ವಿವಿಧ ಸಾಮಾಗ್ರಿಗಳ ಕಿಟ್ ನೀಡಿತ್ತು. ಆದರೆ ಇದೀಗ ಅದೇ ನೆಪವೊಡ್ಡಿ ಆ ಜನರಿಗೆ ಪಡಿತರ ನೀಡಲಾಗುತ್ತಿಲ್ಲ.
ಇದನ್ನೂ ಓದಿ:ಕ್ರೂರಿ ಕೋವಿಡ್: ತಾಯಿ ಶವದ ಎದುರು ದಾಂಪತ್ಯ ಜೀವನಕ್ಕೆ ಕಾಲಿಡುವಂತಾಯಿತು ಪುತ್ರನ ಪರಿಸ್ಥಿತಿ
ತಾಲೂಕು ಆಡಳಿತದ ವಿರುದ್ಧ ಹಳ್ಳಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಸೊಸೈಟಿ ಮುಂದೆ ಧರಣಿಗೆ ಕೂಳಿತಿದ್ದಾರೆ.
ಇದನ್ನೂ ಓದಿ:ತರಿಕೇರೆ: ಕಲ್ಲು ತೂರಾಟ ನಡೆಸಿ ಆ್ಯಂಬುಲೆನ್ಸ್ ಗಾಜು ಒಡೆದ ಕಿಡಿಗೇಡಿಗಳು