Advertisement

ಬಿಪಿಎಲ್‌ಗೆ ಪಡಿತರ ಹಂಚಿಕೆ

12:42 PM Feb 26, 2017 | Harsha Rao |

ಮಂಗಳೂರು: ಜಿಲ್ಲೆಯಲ್ಲಿ ಪಡಿತರ ಚೀಟಿಗಳಿಗೆ ಆಧಾರ್‌ ಸಂಖ್ಯೆ ಜೋಡಣೆ (ಲಿಂಕ್‌) ಮಾಡಲು ಸಾಕಷ್ಟು ಕಾಲಾವಕಾಶ ಕೊಟ್ಟಿದ್ದರೂ ಸಹ ಆಧಾರ ಸಂಖ್ಯೆ ನೀಡದೇ ಇರುವ ಬಿಪಿಎಲ್‌ ಪಡಿತರ ಚೀಟಿಗಳ ಸದಸ್ಯರನ್ನು ಅಮಾನತುಗೊಳಿಸಿ 2016 ನವೆಂಬರ್‌ನಿಂದ ಪಡಿತರ ವಿತರಣೆ ಸ್ಥಗಿತಗೊಳಿಸಲಾಗಿತ್ತು.

Advertisement

ಆದರೆ ಕಡುಬಡ ಕುಟುಂಬಗಳು ಪಡಿತರದಿಂದ ವಂಚಿತರಾಗುವುದನ್ನು ಗಮನಿಸಿ ಅರ್ಹತಾ ಪಟ್ಟಿಯಲ್ಲಿರುವ ಬಿಪಿಎಲ್‌ ಪಡಿತರ ಚೀಟಿಗಳ ಎಲ್ಲ ಸದಸ್ಯರಿಗೆ ಪಡಿತರ ಸಾಮಗ್ರಿಗಳನ್ನು ಫೆಬ್ರವರಿ ತಿಂಗಳಲ್ಲಿ ಹಂಚಿಕೆ ಮಾಡಲಾಗಿದೆ. ಪಡಿತರ ಚೀಟಿದಾರರು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಂದ ಪೂರ್ಣ ಪ್ರಮಾಣದಲ್ಲಿ ಪಡಿತರ ಸಾಮಗ್ರಿಗಳನ್ನು ಪಡೆದುಕೊಳ್ಳುವಂತೆಯೂ ಮತ್ತು ಆಧಾರ್‌ ಲಿಂಕ್‌ ಮಾಡಲು ಬಾಕಿ ಇರುವ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗಳಿಗೆ ಕೂಡಲೇ ಆಧಾರ್‌ ಜೋಡಣೆ ಮಾಡಿಸುವಂತೆಯೂ ಸೂಚಿಸಲಾಗಿದೆ. 

ಅರ್ಹತಾ ಪಟ್ಟಿಯಲ್ಲಿ ಹೆಸರಿದ್ದರೂ ನ್ಯಾಯಬೆಲೆ ಅಂಗಡಿ ಮಾಲಕರು ಕಾರ್ಡಿನಲ್ಲಿ ಹೆಸರು ದಾಖಲಿರುವ ಎಲ್ಲ ಸದಸ್ಯರಿಗೆ ನಿಗದಿತ ಪ್ರಮಾಣ ದಲ್ಲಿ ಪಡಿತರ ಸಾಮಗ್ರಿ ನೀಡಲು ನಿರಾಕರಿಸಿದಲ್ಲಿ ತಾಲೂಕು ಕಚೇರಿ ಆಹಾರ ಶಾಖೆಗೆ ಅಥವಾ ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ.- ಇಲ್ಲಿ ದೂರು ನೀಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next