Advertisement
ಪ್ರಸ್ತುತ ವ್ಯವಸ್ಥೆಯಂತೆ ಫ್ರಾಂಚೈಸಿ ಪಡೆದ ಕೇಂದ್ರದಲ್ಲಿ ಕೂಪನ್ ಪಡೆದು ಪಡಿತರ ವಿತರಣಾ ಕೇಂದ್ರದಲ್ಲಿ ಪಡಿತರ ಪಡೆದುಕೊಳ್ಳಬೇಕಾಗಿದೆ. ಕೂಪನ್ ನೀಡುವ ಜಾಗ ಒಂದು ಊರಿನಲ್ಲಿದ್ದರೆ, ಪಡಿತರ ನೀಡುವ ಸ್ಥಳ ಇನ್ನೊಂದು ಊರಿನಲ್ಲಿದೆ. ಅಲ್ಲದೆ ಪ್ರಾರಂಭಿಕ ಹಂತವಾದ್ದರಿಂದ ಮಾಹಿತಿ ಕೊರತೆಯಿಂದ ಕೂಪನ್ ನೀಡುವ ಸ್ಥಳದಲ್ಲಿ ಗೊಂದಲಮಯ ವಾತಾವರಣ. ಕೂಪನ್ ನೀಡುವ ಸ್ಥಳದಲ್ಲಿ ನೂರಾರು ಮಂದಿ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯ ಕಂಡು ಬರುತ್ತಿದೆ.
ಮನೆಯಿಂದ ಕೂಪನ್ ನೀಡುವ ಸ್ಥಳಕ್ಕೆ ತೆರಳಿ, ತಾಸುಗಟ್ಟಲೆ ಸರತಿಯಲ್ಲಿ ನಿಂತು ಕೂಪನ್ ಪಡೆದು ಬಳಿಕ ಪಡಿತರ ವಿತರಣಾ ಕೇಂದ್ರದಲ್ಲಿ ಕಾದು, ಪಡಿತರವನ್ನು ಆಟೋ ಮೂಲಕ ಮನೆಗೆ ಕೊಂಡೊಯ್ಯುವ ಪರಿಸ್ಥಿತಿ. ಈ ನಡುವೆ ಎಷ್ಟು ಮಾನವ ಶ್ರಮದ ವ್ಯರ್ಥ. ನೀಡುವ ಪಡಿತರ ಉಚಿತವಾದರೂ ಈ ವ್ಯವಸ್ಥೆ ನಮಗೆ ಬೇಕೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಪಡಿತರ ನೀಡುವ ಕೇಂದ್ರದಲ್ಲೇ ಕೂಪನ್ ವಿತರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ಬಾರಕೂರಿನ ಕೂಪನ್ ವಿತರಣಾ ಸ್ಥಳದಲ್ಲಿ ಸೋಮವಾರ ಸರತಿ ಸಾಲಿನಲ್ಲಿ ನಿಂತ ಜನರು ವ್ಯವಸ್ಥೆಗೆ ಹಿಡಿಶಾಪ ಹಾಕಿದರು.