Advertisement

ಪಡಿತರ ವಿತರಣೆ ಅವ್ಯವಸ್ಥೆ: ಡೀಸಿ ತರಾಟೆ

01:50 PM Apr 29, 2021 | Team Udayavani |

ಯಳಂದೂರು: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನಮಾರಾಟ ಸಹಕಾರ ಸಂಘದ ಬಳಿ ಪಡಿತರ ವಿತರಣೆ ಮಾಡುತ್ತಿದ್ದಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಬುಧವಾರ ದಿಢೀರ್‌ ಭೇಟಿ ನೀಡಿ, ಜನರು ಸಾಮಾಜಿಕ ಅಂತರ ಪಾಲಿಸದಕ್ಕೆ ಹಾಗೂ ಇಲ್ಲಿನ ಅವ್ಯಸ್ಥೆಯನ್ನು ಕಂಡು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

Advertisement

ಬಯೋಮೆಟ್ರಿಕ್ ನಿಷೇಧ  ‌:ಇಲ್ಲಿನ ಪಡಿತರ ವಿತರಣೆಗೆ ಬೆರಳಚ್ಚುಪಡೆಯುತ್ತಿದ್ದ ಆಹಾರ ನಿರೀಕ್ಷಕ ಬಿಸಲಯ್ಯ ವಿರುದ್ಧ ಹರಿಹಾಯ್ದಜಿಲ್ಲಾಧಿಕಾರಿಗಳು, ಜಿಲ್ಲಾದ್ಯಂತ ಪಡಿತರ ವಿತರಣೆಗೆ ಕೋವಿಡ್‌ಹಿನ್ನೆಲೆಯಲ್ಲಿ ಬೆರಳಚ್ಚು ಮಾಡುವುದನ್ನು ತಾತ್ಕಾಲಿಕವಾಗಿಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ್ದರೂ ಇಂತಹದುಸ್ಸಾಹಸ ಮಾಡುತ್ತಿ ದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಇಲ್ಲೇ ರಾಗಿಯನ್ನು ಚೀಲದಲ್ಲಿ ತುಂಬಿಡುವ ಬದಲುಗುಡ್ಡೆ ಹಾಕಿಕೊಂಡು ಕೊಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಇಲ್ಲಿನನೌಕರರು ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು.ಸಾಮಾಜಿಕ ಅಂತರ ಪಾಲಿಸುವಂತೆ ಟೋಕನ್‌ಗಳನ್ನು ಕೊಟ್ಟುಕೇವಲ 10 ಮಂದಿ ಮಾತ್ರ ಸರತಿ ಸಾಲಿನಲ್ಲಿ ನಿಂತು ಪಡಿತರಪಡೆಯುವಂತೆ ಮಾಡಬೇಕು, ಇಲ್ಲವಾದಲ್ಲಿ ಇದಕ್ಕೆ ಕಾರಣದವರವಿರುದ್ಧ ಕಾನೂನು ಕ್ರಮ ವಹಿಸುವಂತೆ ಎಚ್ಚರಿಕೆ ನೀಡಿದರು.

ಬಸ್‌ ನಿಲ್ದಾಣದಲ್ಲಿ ಅನಗತ್ಯವಾಗಿ ಓಡಾಡುತ್ತಿರುವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು ಎಂದು ಪೊಲೀಸರಿಗೆ ಡೀಸಿಸೂಚಿಸಿದರು. ತಹಶೀಲ್ದಾರ್‌ ಜಯಪ್ರಕಾಶ್‌, ಇಒ ಉಮೇಶ್‌,ಸಮಾಜ ಕಲ್ಯಾಣ ಇಲಾಖೆಯ ಜಯಕಾಂತ, ಮುಖ್ಯಾಧಿಕಾರಿಎಂ.ಸಿ. ನಾಗರತ್ನ, ಆರೋಗ್ಯಾಧಿಕಾರಿ ಮಹೇಶ್‌ಕುಮಾರ್‌ ಸಿಪಿಐಶೇಖರ್‌, ಗಂಗಾಧರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next